ವಾಷಿಂಗ್ಟನ್: ರಷ್ಯಾ ಹಾಗೂ ಬೆಲಾರಸ್‌ಗೆ ತಮ್ಮ ಐಷಾರಾಮಿ ಸರಕುಗಳ ರಫ್ತಿನ ಮೇಲೆಅಮೆರಿಕದ ವಾಣಿಜ್ಯ ಇಲಾಖೆಯು ಹೊಸ ನಿರ್ಬಂಧಗಳನ್ನು ಹೇರಿದೆ.
ಉಕ್ರೇನ್ ಜೊತೆಗಿರುವುದಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ನಿರ್ಬಂಧಗಳಲ್ಲಿ ಯಾವುದೇ ಸಡಿಲಿಕೆಯಿಲ್ಲ. ಪುಟಿನ್ ನಡೆ ಮತ್ತು ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸುವವರೆಗೆ ನಿರ್ಬಂಧಗಳನ್ನು ಮುಂದುವರಿಸಲಾಗುತ್ತದೆ ಎಂದು ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.
ರಷ್ಯಾದಿಂದ ವಜ್ರ, ಸಾಗರ ಆಹಾರ ಪದಾರ್ಥಗಳು ಮತ್ತು ಮದ್ಯ ಆಮದು ಮಾಡಿಕೊಳ್ಳುವುದನ್ನು ಅಮೆರಿಕ ನಿರ್ಬಂಧಿಸಿದೆ. ಇದೀಗಐಷಾರಾಮಿ ವಾಹನಗಳು, ದುಬಾರಿ ವಾಚುಗಳು, ವಸ್ತ್ರಗಳು, ಮದ್ಯ, ಆಭರಣ ಮತ್ತು ರಷ್ಯನ್ನರು ಹೆಚ್ಚಾಗಿ ಕೊಳ್ಳುವ ದುಬಾರಿ ವಸ್ತುಗಳನ್ನು ಅಮೆರಿಕ ರಫ್ತುಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ರಷ್ಯಾಗೆ ಐಷಾರಾಮಿ ಸರಕುಗಳನ್ನು ರಫ್ತು ಮಾಡುವುದನ್ನು ಯುರೋಪಿಯನ್ ಒಕ್ಕೂಟ ನಿಲ್ಲಿಸುವುದಾಗಿ ಘೋಷಿಸಿತ್ತು.
ರಷ್ಯಾ–ಉಕ್ರೇನ್ ಸಂಘರ್ಷವು 17ನೇ ದಿನಕ್ಕೆ ಕಾಲಿಟ್ಟಿದ್ದು, ಲಕ್ಷಕ್ಕೂ ಹೆಚ್ಚು ನಾಗರಿಕರು ಬೇರೆಬೇರೆ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.