ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಹಾರ್ಕಿವ್ ಮೇಲಿನ ದಾಳಿಯಲ್ಲಿ ಕನಿಷ್ಠ 21 ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 7:37 IST
Last Updated 2 ಮಾರ್ಚ್ 2022, 7:37 IST
ಹಾರ್ಕಿವ್ ಮೇಲಿನ ರಷ್ಯಾ ದಾಳಿ ಬಗ್ಗೆ ಉಕ್ರೇನ್ ಬಿಡುಗಡೆ ಮಾಡಿರುವ ಚಿತ್ರ – ಎಎಫ್‌ಪಿ ಚಿತ್ರ
ಹಾರ್ಕಿವ್ ಮೇಲಿನ ರಷ್ಯಾ ದಾಳಿ ಬಗ್ಗೆ ಉಕ್ರೇನ್ ಬಿಡುಗಡೆ ಮಾಡಿರುವ ಚಿತ್ರ – ಎಎಫ್‌ಪಿ ಚಿತ್ರ   

ಕೀವ್: ಉಕ್ರೇನ್‌ನ ಹಾರ್ಕಿವ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. 112 ಮಂದಿ ಗಾಯಗೊಂಡಿದ್ದಾರೆ ಎಂದು ಹಾರ್ಕಿವ್ ಮೇಯರ್ ಬುಧವಾರ ತಿಳಿಸಿದ್ದಾರೆ.

ಹಾರ್ಕಿವ್‌ ನಗರದ ಪ್ರಾದೇಶಿಕ ಆಡಳಿತದ ಕಟ್ಟಡ ಫ್ರೀಡಮ್‌ ಸ್ಕ್ವೇರ್‌ ಮೇಲೆ ಮಂಗಳವಾರ ಬೆಳಗ್ಗೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು.

ರಷ್ಯಾದ ದಾಳಿಯಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಸಹ ಮೃತಪಟ್ಟಿದ್ದರು. ನವೀನ್ ಸಾವಿಗೆ ಡಚ್ ರಾಯಭಾರಿ ಮಾರ್ಟಿನ್‌ ಬರ್ಗ್ ಸಂತಾಪ ಸೂಚಿಸಿದ್ದಾರೆ.

ADVERTISEMENT

ನಾವು ಅನಿಶ್ಚಿತತೆಯನ್ನು ಎದುರಿಸುತ್ತಿದ್ದೇವೆ. ಉಕ್ರೇನ್‌ನ ಪರಿಸ್ಥಿತಿ ಭೀಕರವಾಗಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಎದುರುನೋಡುತ್ತಿದ್ದೇವೆ. ರಷ್ಯಾ ದಾಳಿಯಲ್ಲಿ ಭಾರತದ ವಿದ್ಯಾರ್ಥಿ ಮೃತಪಟ್ಟಿರುವುದಕ್ಕೆ ವಿಷಾದಿಸುತ್ತೇವೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಮಾರ್ಟಿನ್‌ ಬರ್ಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.