ಡೆಮೊಯಿನ್ (ಅಯೊವಾ): ‘ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧವು ನರಮೇಧವಾಗಿದೆ. ಪುಟಿನ್ ಅವರು ಉಕ್ರೇನ್ ನಾಮಾವಶೇಷ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅಮೆರಿಕಅಧ್ಯಕ್ಷ ಜೋ ಬೈಡನ್ ಆರೋಪಿಸಿದರು.
ವಾಷಿಂಗ್ಟನ್‌ಗೆ ಹಿಂತಿರುಗಲು ಅಯೊವಾದಲ್ಲಿ ಏರ್ ಫೋರ್ಸ್ ಒನ್ ವಿಮಾನ ಏರುವ ಮೊದಲು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್,‘ಹೌದು, ನಾನು ರಷ್ಯಾದ ಆಕ್ರಮಣವನ್ನು ನರಮೇಧ ಎಂದು ಕರೆದಿರುವೆ. ಇಡೀ ಉಕ್ರೇನ್ ಸರ್ವನಾಶಕ್ಕೆ ಪುಟಿನ್‌ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ’ ಎಂದರು.
‘ಉಕ್ರೇನ್ ಅಧಿಕಾರಿಗಳು ಹೇಳಿರುವಂತೆ, ರಷ್ಯಾದ ನಡವಳಿಕೆಯು ನರಮೇಧವೆಂದು ಪರಿಗಣಿಸುವ ಅಂತರರಾಷ್ಟ್ರೀಯ ಮಾನದಂಡಗಳನ್ನು ನಿರ್ಧರಿಸುವುದು ವಕೀಲರಿಗೆ ಬಿಟ್ಟದ್ದು. ಆದರೆ, ಇದು ನನಗೆ ಖಚಿತವಾಗಿ ನರಮೇಧವಾಗಿ ಕಾಣಿಸುತ್ತಿದೆ’ ಎಂದು ಬೈಡನ್ ಹೇಳಿದರು.
‘ರಷ್ಯನ್ನರು ಉಕ್ರೇನ್‌ನಲ್ಲಿ ನಡೆಸಿದ ಭಯಾನಕ ಕೃತ್ಯಗಳ ಪುರಾವೆಗಳು ಹೊರಬರುತ್ತಿವೆ. ನಾವು ಈ ವಿನಾಶದಿಂದ ಹೆಚ್ಚು ಪಾಠ ಕಲಿಯುವಂತಾಗಿದೆ’ ಎಂದು ಬೈಡನ್ ಅವರು ಹೇಳಿದರು.
ಬೈಡನ್ ಅವರ ಹೇಳಿಕೆಯನ್ನು ಪ್ರಶಂಸಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ,ಇದು ನಿಜವಾದ ನಾಯಕನ ನಿಜವಾದ ಮಾತು. ರಷ್ಯಾದ ಆಕ್ರಮಣವನ್ನು ನರಮೇಧವೆಂದೇ ಕರೆಯುವಂತೆ ಪಾಶ್ಚಾತ್ಯ ರಾಷ್ಟ್ರಗಳ ನಾಯಕರನ್ನು ಒತ್ತಾಯಿಸಿದರು.
‘ರಷ್ಯಾದ ದೌರ್ಜನ್ಯ ತಡೆಯಲು ನಮಗೆ ಮತ್ತಷ್ಟು ಭಾರಿ ಶಸ್ತ್ರಾಸ್ತ್ರಗಳ ತುರ್ತು ಅಗತ್ಯವಿದೆ.ಈವರೆಗೆ ಅಮೆರಿಕ ನಮಗೆ ನೀಡಿದ ಸಹಾಯಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ’ ಎಂದು ಝೆಲೆನ್‌ಸ್ಕಿ ಅವರು ಟ್ವೀಟ್ ಮಾಡಿದ್ದಾರೆ.
ನರಮೇಧವೆನ್ನಲು ಮ್ಯಾಕ್ರಾನ್ ನಿರಾಕರಣೆ: ರಷ್ಯಾ ಆಕ್ರಮಣವನ್ನು ನರಮೇಧವೆಂದು ಕರೆಯಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ನಿರಾಕರಿಸಿದ್ದಾರೆ.
‘ಈ ಇಬ್ಬರು (ರಷ್ಯನ್ನರು ಮತ್ತು ಉಕ್ರೇನಿಗರು) ಸಹೋದರರು. ಹಾಗಾಗಿ ನಾನು ಇಂತಹ ಪದ ಬಳಸಲಾರೆ’ ಎಂದು ಹೇಳಿದ್ದಾರೆ.
ಪುಟಿನ್‌ಆಪ್ತ, ಉಕ್ರೇನ್ ರಾಜಕಾರಣಿ ಬಂಧನ
ಕೀವ್ (ಎಪಿ): ರಷ್ಯಾ ಅಧ್ಯಕ್ಷಪುಟಿನ್ ಅವರ ಜತೆಗೆ ನಿಕಟ ಸಂಪರ್ಕ ಹೊಂದಿದ್ದ, ಉಕ್ರೇನ್‌ನಿಂದ ಪರಾರಿಯಾಗಿದ್ದ ಸಿರಿವಂತ ಉದ್ಯಮಿ ವಿಕ್ಟರ್ ಮೆಡ್ವೆಡ್‌ಚುಕ್ ಅವರನ್ನುಭದ್ರತಾ ಮತ್ತು ಗುಪ್ತಚರ ಸಂಸ್ಥೆ (ಎಸ್‌ಬಿಯು) ಬಂಧಿಸಿದೆ.
ಎಸ್‌ಬಿಯು ನಡೆಸಿದವಿಶೇಷ ಕಾರ್ಯಾಚರಣೆಯಲ್ಲಿರಷ್ಯಾದ ಪರ ಒಲವು ಹೊಂದಿರುವ, ಉಕ್ರೇನ್ ವಿರೋಧ ಪಕ್ಷದ ನಾಯಕರೂ ಆಗಿದ್ದ ಮೆಡ್ವೆಡ್‌ಚುಕ್ ಅವರನ್ನು ಬಂಧಿಸಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಡ್ವೆಡ್‌ಚುಕ್‌ಕೈಕೋಳದಲ್ಲಿ ಕುಳಿತಿರುವ ಚಿತ್ರವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ,ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮುಖ್ಯಸ್ಥ ಇವಾನ್ ಬಕಾನೋವ್, ಮೆಡ್ವೆಡ್‌ಚುಕ್ ಬಂಧನದ ಸುದ್ದಿಯನ್ನು ಟೆಲಿಗ್ರಾಮ್‌ನಲ್ಲಿ ಖಚಿತಪಡಿಸಿದರು.
ಮೆಡ್ವೆಡ್‌ಚುಕ್‌ರಷ್ಯಾದ ಪರವಿರುವ ವಿರೋಧ ಪಕ್ಷವನ್ನು ಮುನ್ನಡೆಸುತ್ತಿದ್ದರು. ಯುದ್ಧದ ಪ್ರಾರಂಭಕ್ಕೂ ಮೊದಲು ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.ಅವರು ಫೆಬ್ರುವರಿಯಲ್ಲಿ ಗೃಹಬಂಧನದಿಂದ ತಪ್ಪಿಸಿಕೊಂಡಿದ್ದರು. ಮೆಡ್ವೆಡ್‌ಚುಕ್ ಅವರ ಕಿರಿಯ ಮಗಳಿಗೆ ರಷ್ಯಾ ಅಧ್ಯಕ್ಷಪುಟಿನ್ ಗಾಡ್‌ಫಾದರ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.