ADVERTISEMENT

ರಷ್ಯಾ ಸೇನೆ ವಿರುದ್ಧ ವ್ಯಾಗ್ನರ್ ಗುಂಪು ದಂಗೆ: ಉಕ್ರೇನ್ ಅಧ್ಯಕ್ಷರ ಪ್ರತಿಕ್ರಿಯೆ ಏನು?

ರಾಯಿಟರ್ಸ್
Published 24 ಜೂನ್ 2023, 13:34 IST
Last Updated 24 ಜೂನ್ 2023, 13:34 IST
ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ
ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ   

ಕೀವ್ (ಉಕ್ರೇನ್): ರಷ್ಯಾ ಸೇನಾ ನಾಯಕತ್ವ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಖಾಸಗಿ ಸೇನಾ ಪಡೆ ‘ಪಿಎಂಸಿ ವ್ಯಾಗ್ನರ್ ಗುಂಪು’ ತಿರುಗಿ ಬಿದ್ದಿರುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರತಿಕ್ರಿಯಿಸಿದ್ದಾರೆ.

'ರಷ್ಯಾದ ದೌರ್ಬಲ್ಯ ಸ್ಪಷ್ಟವಾಗಿದೆ. ತನ್ನ ಸೇನೆ ಹಾಗೂ ಖಾಸಗಿ ಸೇನಾ ಪಡೆಯನ್ನು ನಮ್ಮ ನೆಲದಲ್ಲಿ ದೀರ್ಘಕಾಲದವರೆಗೆ ಇರಿಸುತ್ತದೆ. ಇದರಿಂದ ತನಗೆ ತಾನೇ ಮತ್ತಷ್ಟು ಗೊಂದಲ, ನೋವು ಮತ್ತು ಸಂಕಷ್ಟಗಳನ್ನು ಸೃಷ್ಟಿಸಿಕೊಳ್ಳಲಿದೆ' ಎಂದು ಝೆಲೆನ್‌ಸ್ಕಿ ಕುಟುಕಿದ್ದಾರೆ.

ವ್ಯಾಗ್ನರ್ ಗುಂಪಿನ ನಾಯಕ ಯೆವ್ಗೆನಿ ಪ್ರಿಗೊಝಿನ್‌ ರಷ್ಯಾ ಸೇನೆ ವಿರುದ್ಧ ಬಂಡಾಯ ಸಾರಿದ್ದಾರೆ. ರೊಸ್ಟೊವ್‌ ನಗರದಲ್ಲಿರುವ ಸೇನಾ ಪ್ರಧಾನ ಕಚೇರಿಯ ಒಳಗೆ ಇದ್ದೇನೆ ಎಂದಿರುವ ಯೆವ್ಗೆನಿ, ನಮ್ಮ ಯೋಧರು ಸೇನಾ ಸೌಕರ್ಯಗಳ ಮೇಲೆ ಹಿಡಿತ ಸಾಧಿಸಿದ್ದಾರೆ. 25,000 ಯೋಧರನ್ನೊಳಗೊಂಡ ನಮ್ಮ ಬಲಿಷ್ಠ ಪಡೆಯು ರಷ್ಯಾ ಸೇನಾ ನಾಯಕತ್ವ ಉರುಳಿಸುವ ಸಲುವಾಗಿ ಸಾಯುವುದಕ್ಕೂ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

'ಇದು ದೇಶಕ್ಕೆ ಬಗೆದ ದ್ರೋಹ' ಎಂದು ಆಕ್ರೋಶ ವ್ಯಕ್ತಪಡಿಸಿರುವ ಪುಟಿನ್‌, 'ಪ‍್ರಜ್ಞಾಪೂರ್ವಕವಾಗಿ ಯಾರೆಲ್ಲ ವಂಚನೆಯ ಹಾದಿ ತುಳಿದಿದ್ದಾರೋ, ಯಾರು ಶಸ್ತ್ರಸಜ್ಜಿತ ಬಂಡಾಯವನ್ನು ಸಜ್ಜುಗೊಳಿಸಿದ್ದಾರೋ, ಭಯಗೊಳಿಸುವ ಮತ್ತು ಭಯೋತ್ಪಾದಕ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೋ ಅವರೆಲ್ಲರೂ ನೆಲದ ಕಾನೂನು ಮತ್ತು ಜನರೆದುರು ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ' ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ವ್ಯಾಗ್ನರ್ ಗುಂಪು: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.