ADVERTISEMENT

ರಷ್ಯಾ: ಬ್ಲಾಗರ್‌ ಕೊಂದ ಮಹಿಳೆಗೆ 27 ವರ್ಷ ಜೈಲು!

ಏಜೆನ್ಸೀಸ್
Published 25 ಜನವರಿ 2024, 15:53 IST
Last Updated 25 ಜನವರಿ 2024, 15:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟಲ್ಲಿನ್/ಎಸ್ಟೋನಿಯ: ಪ್ರಮುಖ ಬ್ಲಾಗರ್‌ ಸಾವಿಗೆ ಕಾರಣವಾಗಿದ್ದ ಫಲಾಹಾರ ಮಂದಿರ ಸ್ಫೋಟದ ಆರೋಪಿಯಾಗಿದ್ದ ಮಹಿಳೆಗೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನ್ಯಾಯಾಲಯ ಗುರುವಾರ 27 ವರ್ಷ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಿದೆ.

ದರ್ಯಾ ಟ್ರೆಪೊವಾ (26) ಜೈಲು ಶಿಕ್ಷೆಗೊಳಗಾದ ಮಹಿಳೆಯಾಗಿದ್ದು, ಲಾಡ್ಲೆನ್ ಟಟಾರ್ಸ್ಕಿ ಎನ್ನುವ ಬ್ಲಾಗರ್ ಕೊಲೆ ಆರೋಪಕ್ಕೆ ಅವರಿಗೆ ಸೇಂಟ್ ಪೀಟರ್ಸ್‌ಬರ್ಗ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ.    

ಉಕ್ರೇನ್ ಮೇಲಿನ ದಾಳಿಯನ್ನು ಬೆಂಬಲಿಸುತ್ತಿದ್ದ ಬ್ಲಾಗರ್‌ ಟಟಾರ್ಸ್ಕಿಗೆ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ನಂತರ ಅದು ಸ್ಫೋಟಗೊಂಡಿತ್ತು. ದರ್ಯಾ ಟಟಾರ್ಸ್ಕಿಗೆ ಪ್ರತಿಮೆ ನೀಡುವುದು ವಿಡಿಯೊದಲ್ಲಿ ಸೆರೆಯಾಗಿತ್ತು.   

ADVERTISEMENT

ಲಾಡ್ಲೆನ್ ಟಟಾರ್ಸ್ಕಿ ಸಾವು ಮತ್ತು ಇತರ 52 ಮಂದಿ ಗಾಯಾಳುಗಳಾಗುವುದಕ್ಕೆ ಕಾರಣವಾಗಿದ್ದ ದರ್ಯಾ ವಿರುದ್ಧ ಉಗ್ರ ದಾಳಿ, ಸ್ಫೋಟಕಗಳ ಅಕ್ರಮ ಸಾಗಣೆ, ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪಗಳಡಿ ವಿಚಾರಣೆ ನಡೆಸಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.