ADVERTISEMENT

ಉಕ್ರೇನ್: ಡ್ರೋನ್ ದಾಳಿ, 7 ಸಾವು

ಏಜೆನ್ಸೀಸ್
Published 10 ಫೆಬ್ರುವರಿ 2024, 13:33 IST
Last Updated 10 ಫೆಬ್ರುವರಿ 2024, 13:33 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಕೀವ್‌: ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಹಾರ್ಕಿವ್‌ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 7 ಜನರು ಮೃತಪಟ್ಟಿದ್ದಾರೆ ಎಂದು ಹಾರ್ಕಿವ್‌ನ ಗವರ್ನರ್‌ ಒಲೆಹ್ ಸಿನಿಹುಬೊವ್‌ ಶನಿವಾರ ತಿಳಿಸಿದ್ದಾರೆ.

ನಗರದ ನೆಮಿಶ್ಲಿಯನ್ ಜನವಸತಿ ಪ್ರದೇಶದ ಮೇಲೆ ಇರಾನ್ ನಿರ್ಮಿತ ಶಾಹಿದ್ ಡ್ರೋನ್‌ ಅಪ್ಪಳಿಸಿತು. ಇದರಿಂದ 15 ಮನೆಗಳು ಸುಟ್ಟು ಹೋಗಿವೆ ಎಂದು ಹೇಳಿದ್ದಾರೆ.

ADVERTISEMENT

‘50ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ’ ಎಂದು ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ತಿಳಿಸಿದ್ದಾರೆ.

‘ಈಶಾನ್ಯ ಹಾರ್ಕಿವ್ ಹಾಗೂ ದಕ್ಷಿಣ ಪ್ರಾಂತ್ಯದ ಒಡೆಸಾವನ್ನು ಗುರಿಯಾಗಿಸಿಕೊಂಡು ರಷ್ಯಾ ರಾತ್ರೋರಾತ್ರಿ ಇರಾನ್‌ ನಿರ್ಮಿತ 31 ಶಾಹಿದ್ ಡ್ರೋನ್‌ಗಳನ್ನು ಉಡಾಯಿಸಿತು. ಇವುಗಳ ಪೈಕಿ 23 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ’ ಎಂದು ಉಕ್ರೇನ್ ವಾಯುಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಡ್ರೋನ್ ದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ’ ಎಂದು ಒಡೆಸಾದ ಗವರ್ನರ್ ಒಲೆಹ್ ಕಿಪರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.