ಹಾರ್ಕೀವ್: ಗುರುವಾರ ರಾತ್ರಿ ರಷ್ಯಾ ಪಡೆಗಳು ನಡೆಸಿದ ದಾಳಿಯಲ್ಲಿ ಹಾರ್ಕೀವ್‌ನಲ್ಲಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ, ಒಡೆಸಾ ನಗರದಲ್ಲಿ ಒಂದು ಸಾವು ಸಂಭವಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸೋವಿಯತ್ ಕಾಲದ ಜನವಸತಿ ಕಟ್ಟಡಗಳು ದಾಳಿಯಲ್ಲಿ ಹಾನಿಗೊಳಗಾಗಿದ್ದು, ಒಡೆದ ಗಾಜು ಮತ್ತು ಅವಶೇಷಗಳಿಂದ ಸುತ್ತುವರಿದಿದೆ. ರಾತ್ರಿ ವೇಳೆ ರಕ್ಷಣಾ ಸಿಬ್ಬಂದಿ ಭಯಭೀತ ನಾಗರಿಕರನ್ನು ಕಟ್ಟಡಗಳಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ.
ಸಂಜೆ ಮತ್ತು ರಾತ್ರಿಯುದ್ದಕ್ಕೂ ಉಕ್ರೇನ್‌ನ ನಗರಗಳು ಮತ್ತು ಜನರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ‘ಒಡೆಸಾ, ಹಾರ್ಕಿವ್ ಮತ್ತು ಕೀವ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಗ್ಲೈಡ್ ಬಾಂಬ್‌ಗಳನ್ನು ಬಳಸಲಾಗಿದೆ’ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಉಕ್ರೇನ್‌ನಾದ್ಯಂತ ರಾತ್ರಿ ವೇಳೆ ರಷ್ಯಾ ಐದು ಕ್ಷಿಪಣಿಗಳು, 92 ಡ್ರೋನ್‌ಗಳು ಮತ್ತು ಗ್ಲೈಡ್ ಬಾಂಬ್‌ಗಳನ್ನು ಬಳಸಿ ದಾಳಿ ನಡೆಸಿದೆ. 4 ಕ್ಷಿಪಣಿಗಳು ಮತ್ತು 62 ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ರಾತ್ರಿಯ ಬಾಂಬ್ ದಾಳಿಗಳಲ್ಲಿ ರಷ್ಯಾವು, ಹಾರ್ಕಿವ್ ನಗರವನ್ನು ಗುರಿಯಾಗಿಸಿಕೊಳ್ಳುತ್ತಿದ್ದು, ಅಲ್ಲಿ 25 ಜನ ಗಾಯಗೊಂಡಿದ್ದಾರೆ.
ಕೀವ್ ಬಳಿ ನಾಲ್ವರು ಗಾಯಗೊಂಡಿದ್ದಾರೆ. ಐತಿಹಾಸಿಕ ಕಪ್ಪು ಕರಾವಳಿ ನಗರ ಒಡೆಸಾದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.