ಮಾಸ್ಕೊ:‘ನಕಲಿ, ಸುಳ್ಳು, ದಾರಿ ತಪ್ಪಿಸುವ ವಿಷಯ ಯಾವುದು? ಎಂಬುದನ್ನು ನಿರ್ಧರಿಸಲು ಸರ್ಕಾರದ ಪ್ರಾಧಿಕಾರವೊಂದಕ್ಕೆ ಸಂಪೂರ್ಣ ಅಧಿಕಾರ ಕೊಡುವುದು ಕಷ್ಟವಿದೆ. ಈ ತಿದ್ದುಪಡಿಯ ಹಿಂದಿನ ಅವಶ್ಯಕತೆಯನ್ನು ಇನ್ನೂ ಅರ್ಥ ಮಾಡಿಕೊಳ್ಳಲಾಗಿಲ್ಲ’ ಎಂದು ಕೋರ್ಟ್ ಹೇಳಿದೆ ಕಾನೂನು ಅಥವಾ ವೈದ್ಯಕೀಯವಾಗಿ ಲಿಂಗ ಪರಿವರ್ತನೆ ಪ್ರಕ್ರಿಯೆಗೆ ನಿಷೇಧ ಹೇರುವ ಮಸೂದೆಗೆ ರಷ್ಯಾದ ಸಂಸತ್ತಿನ ಕೆಳಮನೆ ಶುಕ್ರವಾರ ಅನುಮೋದನೆ ನೀಡಿತು. ಈ ಮೂಲಕ ಎಲ್‌ಜಿಬಿಟಿ ವರ್ಗದ ಹಕ್ಕುಗಳಿಗೆ ಭಾಗಶಃ ನಿರ್ಬಂಧ ಹೇರಿದಂತಾಗಿದೆ.
1997ರಿಂದ ಸಿಂಧುವಾಗಿರುವ ಅಧಿಕೃತ ದಾಖಲೆಗಳಲ್ಲಿ ರಷ್ಯಾದ ನಾಗರಿಕರು ಲಿಂಗಪರಿವರ್ತನೆ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಮಸೂದೆ ನಿರ್ಬಂಧ ಹೇರಲಿದೆ. ಹಾಗೂ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಹಾಗೂ ಹಾರ್ಮೋನ್ ಥೆರಪಿ ನಡೆಸುವುದನ್ನು ನಿಷೇಧಿಸಲಿದೆ.
ಕೆಳಮನೆಯಲ್ಲಿ ಗುರುವಾರ ಚರ್ಚೆಯ ಬಳಿಕ ಉದ್ದೇಶಿತ ಮಸೂದೆಗೆ ಹೆಚ್ಚುವರಿಯಾಗಿ ಕೆಲ ಅಂಶಗಳನ್ನು ಸೇರಿಸಲಾಯಿತು.
ಅದರ ಪ್ರಕಾರ, ಟ್ರಾನ್ಸ್‌ಜೆಂಡರ್ ಸಮುದಾಯದವರು ಮಕ್ಕಳನ್ನು ದತ್ತು ಪಡೆಯುವುದು, ಪಾಲನೆ ಮಾಡುವುದನ್ನು ನಿಷೇಧಿಸಲಾಗುತ್ತದೆ. ಅಲ್ಲದೆ, ದಂಪತಿಯಲ್ಲಿ ಒಬ್ಬರು ಲಿಂಗಪರಿವರ್ತನೆ ಮಾಡಿಕೊಂಡಿದ್ದಲ್ಲಿ ಅವರ ವಿವಾಹದ ರದ್ದತಿಗೂ ಅವಕಾಶ ಕಲ್ಪಿಸಲಿದೆ.
ಉದ್ದೇಶಿತ ಮಸೂದೆಗೆ ವೈದ್ಯರ ಸಮುದಾಯ ಹಾಗೂ ಟ್ರಾನ್ಸ್‌ಜೆಂಡರ್ ಹಕ್ಕುಗಳ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಷೇಧ ಕ್ರಮವು ಹಾರ್ಮೋನ್ ಥೆರಪಿಯ ಕಾಳಸಂತೆ ಮಾರುಕಟ್ಟೆಗೆ ಉತ್ತೇಜನ ನೀಡಿದಂತಾಗಲಿದೆ ಹಾಗೂ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಪಡೆಯಲು ಆಗದೇ ಯುವ ಸಮುದಾಯ ಆತ್ಮಹತ್ಯೆಗೂ ಯತ್ನಿಸಬಹುದು ಎಂದು ಎಚ್ಚರಿಸಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಎಲ್‌ಜಿಬಿಟಿ ಸಮುದಾಯದವರ ಜೀವನಶೈಲಿಯು ರಷ್ಯಾದ ಸಾಂಪ್ರಾದಾಯಿಕ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ. ಇದನ್ನು ಒಪ್ಪುವುದು ನೈತಿಕತೆಯ ಹಿನ್ನಡೆಗೆ ನಿದರ್ಶನವಾಗಲಿದೆ ಎಂದು ಪ್ರತಿಪಾದಿಸಿದ್ದರು.
ಸ್ಪೀಕರ್ ಯಚೆಸ್ಲಾವ್ ವೊಲೊಡಿನ್ ಅವರು, ‘ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಯು ದೇಶದ ಪೀಳಿಗೆಯ ಅವನತಿಗೆ ದಾರಿಯಾಗಲಿದೆ‘ ಎಂದು ಟೆಲಿಗ್ರಾಮ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಸೂದೆಯನ್ನು ಅಂಗೀಕರಿಸಿ ರಷ್ಯಾದ ಮೇಲ್ಮನೆಯ (ಕೌನ್ಸಿಲ್) ವಿವೇಚನೆಗೆ ಕಳುಹಿಸುವ ಮುನ್ನ ಶಾಸನಸಭೆಯಲ್ಲಿ ಮೂರು ಹಂತದ ಚರ್ಚೆ ಆಗಲಿದೆ. ಮೇಲ್ಮನೆ ಅಂಗೀಕಾರದ ಬಳಿಕ ಅನುಮೋದನೆಗೆ ಅಧ್ಯಕ್ಷ ಪುಟಿನ್ ಅವರಿಗೆ ಕಳುಹಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.