ADVERTISEMENT

ಉಕ್ರೇನ್‌ ವಿದ್ಯುತ್‌ ಗ್ರಿಡ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 13:48 IST
Last Updated 26 ಸೆಪ್ಟೆಂಬರ್ 2024, 13:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೀವ್‌: ಉಕ್ರೇನ್‌ನ ಪ್ರಮುಖ ವಿದ್ಯುತ್‌ ಸಂಪರ್ಕ ಜಾಲವನ್ನು ಗುರಿಯಾಗಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.  

ರಾಜಧಾನಿ ಕೀವ್‌ ಮೇಲೆ ತೂರಿ ಬಂದ ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಉಕ್ರೇನ್‌ನ ವಾಯು ರಕ್ಷಣಾ ಪಡೆಗಳು ಐದು ತಾಸು ಹೋರಾಟ ನಡೆಸಿದವು ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ADVERTISEMENT

ಕೀವ್‌ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಗರದಲ್ಲಿ ಶಿಶುವಿಹಾರ, ಗ್ಯಾಸ್‌ ಪೈಪ್ ಮತ್ತು ಸುಮಾರು 20 ಕಾರುಗಳಿಗೆ ಹಾನಿಯಾಗಿದೆ ಎಂದು ಕೀವ್‌ ಸೇನಾ ಆಡಳಿತ ತಿಳಿಸಿದೆ.

ಉಕ್ರೇನ್‌ನ ಪಶ್ಚಿಮ ಇವಾನೊ-ಫ್ರಾಂಕಿವ್ಸ್ಕ್ ಪ್ರದೇಶದಲ್ಲಿ ಇಂಧನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಕ್ಷಿಣದ ಮೈಕೋಲೈವ್ ಪ್ರದೇಶದಲ್ಲಿಯೂ ವಿದ್ಯುತ್‌ ಸಂಪರ್ಕ ಜಾಲದ ಮೇಲೆ ದಾಳಿಯಾಗಿದೆ. ದಕ್ಷಿಣ ಒಡೆಸಾ ಪ್ರದೇಶದಲ್ಲಿ ಕ್ಷಿಪಣಿ ದಾಳಿಯಿಂದ  62 ವರ್ಷದ ಮಹಿಳೆ ಹತರಾಗಿದ್ದು, ಮನೆಗಳು ಮತ್ತು ಕಾರುಗಳು ಹಾನಿಗೀಡಾಗಿವೆ.

ಝಪೊರಿಝಿಯಾ ನಗರದಲ್ಲಿ ರಾತ್ರಿ ನಡೆದ ಕ್ಷಿಪಣಿ ದಾಳಿಯಲ್ಲಿ 14 ವರ್ಷದ ಬಾಲಕ ಸೇರಿ ಎಂಟು ಜನ ಗಾಯಗೊಂಡಿದ್ದಾರೆ.

ರಷ್ಯಾ ಪಡೆಗಳು, ಬುಧವಾರ ರಾತ್ರಿಯಿಂದ ಗುರುವಾರ ನಸುಕಿನವರೆಗೂ ಉಕ್ರೇನ್‌ ಮೇಲೆ ಆರು ಕ್ಷಿಪಣಿಗಳು ಮತ್ತು 78 ಡ್ರೋನ್‌ಗಳನ್ನು ಉಡಾಯಿಸಿವೆ. ಇದರಲ್ಲಿ ನಾಲ್ಕು ಕ್ಷಿಪಣಿಗಳನ್ನು ಮತ್ತು 66 ಡ್ರೋನ್‌ಗಳನ್ನು ವಾಯು ಮಾರ್ಗದಲ್ಲೇ ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.