ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: 13 ಮಂದಿ ಸಾವು

ಏಜೆನ್ಸೀಸ್
Published 8 ಜುಲೈ 2024, 13:35 IST
Last Updated 8 ಜುಲೈ 2024, 13:35 IST
..
..   

ಕೀವ್ : ರಷ್ಯಾವು ಉಕ್ರೇನ್‌ ಮೇಲೆ ಎರಡು ಪ್ರತ್ಯೇಕ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಕ್ಷಿಪಣಿಗಳು ಉಕ್ರೇನ್‌ನ ಅತಿ ದೊಡ್ಡ ಮಕ್ಕಳ ಆಸ್ಪತ್ರೆಯೆನಿಸಿದ ‘ಒಖ್ಮಾಡಿಟ್‌’ಗೆ ಅಪ್ಪಳಿಸಿದ್ದು, ಇದರ ಪರಿಣಾಮ ಕೀವ್‌ನ ಕನಿಷ್ಠ ಮೂವರು ಮೃತರಾಗಿದ್ದಾರೆ ಮತ್ತು ಮಧ್ಯ ಉಕ್ರೇನ್‌ನ ಕ್ರಿವ್ಯಿ ರಿಹ್ ನಗರದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದು ಹಲವು ತಿಂಗಳಲ್ಲಿಯೇ ಕೀವ್‌ನಲ್ಲಿ ನಡೆದ ಅತಿದೊಡ್ಡ ಸ್ಫೋಟವಾಗಿದ್ದು, ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲಿ ಒಂದಾದ ಕಿಂಜಲ್‌ ಹೈಪರ್ಸಾನಿಕ್‌ ಕ್ಷಿಪಣಿ ದಾಳಿಯನ್ನೂ ಒಳಗೊಂಡಿದೆ ಎಂದು ಉಕ್ರೇನ್‌ ವಾಯುಪಡೆ ತಿಳಿಸಿದೆ.

ADVERTISEMENT

‘ರಷ್ಯಾವು ವಿಭಿನ್ನ ಬಗೆಯ 40ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬಳಸಿ ಐದು ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.