ಕೀವ್: ದಕ್ಷಿಣ ಉಕ್ರೇನ್‌ನ ಬಂದರು ನಗರಿ ಒಡೆಸಾ ಮೇಲೆ ರಷ್ಯಾ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಲ್ಲಿ 14 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್‌ನ ಅತಿದೊಡ್ಡ ಖಾಸಗಿ ವಿತರಣಾ ಕಂಪನಿ ನೋವಾ ಪೋಷ್ಟಾಗೆ ಸೇರಿದ ಬೃಹತ್ ಗೋದಾಮನ್ನು ಗುರಿಯಾಗಿಸಿಕೊಂಡು ಸಹ ಕ್ಷಿಪಣಿ ದಾಳಿ ನಡೆದಿದ್ದು, ಈ ವೇಳೆ ಯಾವೊಬ್ಬ ಸಿಬ್ಬಂದಿಯು ಗಾಯಗೊಂಡಿಲ್ಲ ಎಂದು ಕಂಪನಿ ತಿಳಿಸಿದೆ. ಆದರೆ ಗೋದಾಮಿಗೆ ಬೆಂಕಿ ಬಿದ್ದಿದ್ದು, ವ್ಯಾಪಕ ಪ್ರಮಾಣದಲ್ಲಿ ಆವರಿಸಿಕೊಂಡಿದೆ.
ಒಡೆಸಾ ನಗರದ ಮೇಲೆ ವಾರದ ಅವಧಿಯಲ್ಲಿ ನಡೆದ ಮೂರನೇ ದಾಳಿ ಇದಾಗಿದೆ. ಸೋಮವಾರ ನಡೆದ ದಾಳಿಯಲ್ಲಿ ಆರು ಜನರು ಮೃತಪಟ್ಟಿದ್ದರು. ನಂತರ ಎರಡು ದಿನಗಳ ಬಳಿಕ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.