ಕೀವ್ (ಎಪಿ): ಉಕ್ರೇನ್‌ನ ಆಗ್ನೇಯ ಮತ್ತು ಪಶ್ಚಿಮ ಭಾಗದಲ್ಲಿರುವ ಇಂಧನ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ ರಾತ್ರಿ ರಷ್ಯಾ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧಿಕಾರಿಯೊಬ್ಬರು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಉಕ್ರೇನ್‌ನ ವಿದ್ಯುತ್ ಉತ್ಪಾದಕ ಘಟಕಗಳನ್ನು ಗುರಿಯಾಗಿಸಿ ನಡೆದ 8ನೇ ಅತಿದೊಡ್ಡ ದಾಳಿ ಇದು. ರಷ್ಯಾ 16 ಕ್ಷಿಪಣಿಗಳು ಮತ್ತು 13 ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಈ ಪೈಕಿ 12 ಕ್ಷಿಪಣಿಗಳು ಮತ್ತು 13 ಡ್ರೋನ್‌ಗಳಿಗೆ ತಡ್ಡೆಯೊಡ್ಡುವಲ್ಲಿ ಉಕ್ರೇನ್ ವಾಯುಪಡೆ ಯಶಸ್ವಿಯಾಗಿದೆ ಎಂದು ವಾಯುಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ದೇಶಗಳು ತಮ್ಮ ಎದುರಾಳಿ ರಾಷ್ಟ್ರವು ಯುದ್ಧದಲ್ಲಿ ಸಂಪನ್ಮೂಲಗಳನ್ನು ಕ್ರೋಢಿಕರಿಸಿಕೊಳ್ಳಲು ಸಾಧ್ಯವಾಗದಂತೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಪರಸ್ಪರ ದಾಳಿ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.