ADVERTISEMENT

ಮಾಸ್ಕೊ: ವಸತಿ ಕಟ್ಟಡ ಮೇಲೆ ಯುದ್ಧ ವಿಮಾನ ಪತನ, 13 ಮಂದಿ ಸಾವು

ಏಜೆನ್ಸೀಸ್
Published 18 ಅಕ್ಟೋಬರ್ 2022, 12:32 IST
Last Updated 18 ಅಕ್ಟೋಬರ್ 2022, 12:32 IST
ರಷ್ಯಾದ ಯುದ್ಧವಿಮಾನವೊಂದು ಯೇಸ್ಕೆ ನಗರದಲ್ಲಿನ ಒಂಭತ್ತು ಅಂತಸ್ತಿನ ಕಟ್ಟಡ ಮೇಲೆ ಸೋಮವಾರ ಪತನಗೊಂಡು ಸ್ಫೋಟಿಸಿದ್ದರಿಂದ ಬೆಂಕಿಯ ಚೆಂಡು ಆವರಿಸಿರುವುದು –ಎಪಿ/ಪಿಟಿಐ ಚಿತ್ರ
ರಷ್ಯಾದ ಯುದ್ಧವಿಮಾನವೊಂದು ಯೇಸ್ಕೆ ನಗರದಲ್ಲಿನ ಒಂಭತ್ತು ಅಂತಸ್ತಿನ ಕಟ್ಟಡ ಮೇಲೆ ಸೋಮವಾರ ಪತನಗೊಂಡು ಸ್ಫೋಟಿಸಿದ್ದರಿಂದ ಬೆಂಕಿಯ ಚೆಂಡು ಆವರಿಸಿರುವುದು –ಎಪಿ/ಪಿಟಿಐ ಚಿತ್ರ   

ಮಾಸ್ಕೊ: ಎಂಜಿನ್‌ ವೈಫಲ್ಯದಿಂದಾಗಿ ರಷ್ಯಾದ ಯುದ್ಧ ವಿಮಾನವೊಂದು ಓಝೋ ಸಮುದ್ರ ಪ್ರದೇಶದಲ್ಲಿರುವಯೇಸ್ಕೆ ನಗರದ ವಸತಿ ಪ್ರದೇಶದಲ್ಲಿರುವ ಒಂಭತ್ತು ಅಂತಸ್ತಿನ ಕಟ್ಟಡದ ಮೇಲೆ ಸೋಮವಾರ ಪತನವಾಗಿದೆ. ಈ ಅವಘಡದಲ್ಲಿ ಕಟ್ಟಡದಲ್ಲಿದ್ದ 13 ಮಂದಿ ಮೃತಪಟ್ಟಿದ್ದಾರೆ.

‘ಎಸ್‌ಯು–34 ಯುದ್ಧವಿಮಾನವು ತರಬೇತಿ ನಿರತವಾಗಿತ್ತು. ಯೇಸ್ಕೆ ನಗರದಿಂದ ವಿಮಾನವು ಟೇಕ್‌ಆಫ್‌ ಆದ ಕೆಲವೇ ಹೊತ್ತಿನಲ್ಲಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಪತನವಾಯಿತು’ ಎಂದು ರಷ್ಯಾ ರಕ್ಷಣಾ ಸಚಿವರು ಹೇಳಿದರು.

‘ವಿಮಾನದಲ್ಲಿದ್ದ ಇಬ್ಬರು ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಹೊರಹಾರಿದ್ದಾರೆ. ಆದರೆ, ವಿಮಾನವು ವಸತಿ ಕಟ್ಟಡದ ಮೇಲೆ ಎರಗಿದ್ದಲ್ಲದೆ ಇಂಧನ ಸ್ಫೋಟಗೊಂಡಿದ್ದರಿಂದ ಭಾರಿ ಬೆಂಕಿ ಹೊತ್ತಿಕೊಂಡಿತು. ಬೆಂಕಿಯ ಕೆನ್ನಾಲಗೆಯಿಂದ ಹಲವರು ಮೃತಪಟ್ಟರೆ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಹೊರಕ್ಕೆ ಹಾರಿದ ಇತರ ಮೂವರು ಮೃತಪಟ್ಟರು’ ಎಂದರು.

ADVERTISEMENT

‘ಕಟ್ಟಡದ ಅವಶೇಷಗಳ ಮಧ್ಯೆ 13 ನಿವಾಸಿಗಳ ಮೃತದೇಹಗಳು ಸಿಕ್ಕಿವೆ. ಇದರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ. 19 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದಲ್ಲಿದ್ದ 500 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ’ ಎಂದರು.

ಫೆಬ್ರುವರಿ 24ರಂದು ಉಕ್ರೇನ್‌ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದ ಬಳಿಕ ಯುದ್ಧ ಹೊರತಾದ ಅಪಘಾತಗಳಲ್ಲಿ ರಷ್ಯಾದ 10 ಯುದ್ಧವಿಮಾನಗಳು ನಾಶವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.