ಕೀವ್: ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ವಿಕಿರಣಶೀಲ ತ್ಯಾಜ್ಯದ ನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದ ಹೊಸ ಪ್ರಯೋಗಾಲಯವನ್ನು ರಷ್ಯಾದ ಪಡೆಗಳು ನಾಶಪಡಿಸಿವೆ ಎಂದು ಚೆರ್ನೋಬಿಲ್ ಹೊರ ವಲಯದ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
ಯುದ್ಧದ ಆರಂಭದಲ್ಲಿ ರಷ್ಯಾದ ಸೇನೆಯು ಸ್ಥಗಿತಗೊಂಡಿದ್ದ ಸ್ಥಾವರವನ್ನು ವಶಪಡಿಸಿಕೊಂಡಿತು. ಬಹಿಷ್ಕರಣ ವಲಯವು ಸ್ಥಾವರದ ಸುತ್ತಲಿನ ಕಲುಷಿತ ಪ್ರದೇಶವಾಗಿದ್ದು, 1986 ರಲ್ಲಿ ಚೆರ್ನೊಬಿಲ್ ದುರಂತ ಸಂಭವಿಸಿತ್ತು.
ಯುರೋಪಿಯನ್ ಕಮಿಷನ್ ಬೆಂಬಲದೊಂದಿಗೆ 6 ಮಿಲಿಯನ್ ಯುರೋ ವೆಚ್ಚದಲ್ಲಿ ನಿರ್ಮಿಸಲಾದ ಈ ಪ್ರಯೋಗಾಲಯವನ್ನು 2015 ರಲ್ಲಿ ತೆರೆಯಲಾಗಿತ್ತು ಎಂದು ಉಕ್ರೇನ್ ಹೇಳಿದೆ.
ಈ ಪ್ರಯೋಗಾಲಯವು 'ಹೆಚ್ಚು ಸಕ್ರಿಯವಾಗಿರುವ ಸ್ಯಾಂಪಲ್‌ಗಳು ಮತ್ತು ರೇಡಿಯೊನ್ಯೂಕ್ಲೈಡ್‌ಗಳ ಮಾದರಿಗಳನ್ನು ಹೊಂದಿದೆ. ಇದು ಈಗ ಶತ್ರುಗಳ ಕೈಯಲ್ಲಿದೆ, ಅದು ತನಗೆ ತಾನೇ ಹಾನಿ ಮಾಡಿಕೊಳ್ಳುತ್ತದೆ ಮತ್ತು ನಾಗರಿಕ ಜಗತ್ತಿಗೆ ಅಲ್ಲ ಎಂದು ನಾವು ಭಾವಿಸುತ್ತೇವೆ' ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರೇಡಿಯೋನ್ಯೂಕ್ಲೈಡ್ ಎನ್ನುವುದು ವಿಕಿರಣವನ್ನು ಸೂಸುವ ರಾಸಾಯನಿಕ ಅಂಶಗಳ ಅಸ್ಥಿರ ಅಣುಗಳಾಗಿವೆ.
ಮತ್ತೊಂದು ಆತಂಕಕಾರಿ ಬೆಳವಣಿಗೆಯಲ್ಲಿ, ಸ್ಥಾವರದ ಸುತ್ತಲಿನ ವಿಕಿರಣ ಪರಿವೀಕ್ಷಣಾ ಸಾಧನಗಳು ಕಾರ್ಯಾಚರಣೆ ನಿಲ್ಲಿಸಿವೆ ಎಂದು ಉಕ್ರೇನ್‌ನ ಪರಮಾಣು ನಿಯಂತ್ರಣ ಸಂಸ್ಥೆ ಸೋಮವಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.