ADVERTISEMENT

ಕೆಲ ವಿಚಾರಗಳ ಬಗ್ಗೆ ಉಕ್ರೇನ್ ರಾಜಿ ಮಾಡಿಕೊಳ್ಳುವ ಭರವಸೆ ಇದೆ: ರಷ್ಯಾ

ರಾಯಿಟರ್ಸ್
Published 16 ಮಾರ್ಚ್ 2022, 10:03 IST
Last Updated 16 ಮಾರ್ಚ್ 2022, 10:03 IST
ವ್ಲಾಡಿಮಿರ್ ಪುಟಿನ್ - ವೊಲೊಡಿಮಿರ್ ಝೆಲೆನ್‌ಸ್ಕಿ
ವ್ಲಾಡಿಮಿರ್ ಪುಟಿನ್ - ವೊಲೊಡಿಮಿರ್ ಝೆಲೆನ್‌ಸ್ಕಿ   

ಲಂಡನ್: 'ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆ ಸುಲಭವಲ್ಲ. ಆದರೆ, ಕೆಲ ವಿಚಾರಗಳ ಬಗ್ಗೆ ರಾಜಿ ಮಾಡಿಕೊಳ್ಳುವ ಭರವಸೆ ಇದೆ. ಸಹಜವಾಗಿಯೇ ಭದ್ರತಾ ಖಾತರಿಗಳೊಂದಿಗೆ ಉಕ್ರೇನ್‌ ತಟಸ್ಥತೆ ಕುರಿತು ಗಂಭೀರವಾಗಿ ಚರ್ಚಿಸಲಾಗುತ್ತಿದೆ' ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್‌ ಬುಧವಾರ ತಿಳಿಸಿದ್ದಾರೆ.

ಪೂರ್ವ ಉಕ್ರೇನ್‌ನಲ್ಲಿನ ಜನರ ಸುರಕ್ಷತೆ, ಉಕ್ರೇನ್‌ನ ಸಶಸ್ತ್ರೀಕರಣ ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಭಾಷೆಯನ್ನು ಮಾತನಾಡುವ ಜನರ ಹಕ್ಕುಗಳನ್ನು ಒಳಗೊಂಡಿರುವ ಪ್ರಮುಖ ವಿಷಯಗಳು ಹಾಗೆಯೇ ಉಳಿದಿವೆ ಎಂದು ಅವರು ಆರ್‌ಬಿಸಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಪ್ರಯೋಜನವಾಗಿಲ್ಲ. ಯುದ್ಧಪೀಡಿತ ದೇಶದಿಂದ ಸಾವಿರಾರು ಜನರು ನೆರೆ ದೇಶಗಳಿಗೆ ಫಲಾಯನ ಮಾಡಿದ್ದಾರೆ.

ADVERTISEMENT

ಫೆ.24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಷ್ಯಾದ ಈ ನಿಲುವನ್ನು ವಿರೋಧಿಸಿರುವ ವಿಶ್ವ ಸಮುದಾಯ ಈಗಾಗಲೇ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.