ಬ್ರಸೆಲ್ಸ್: ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಬೆಲ್ಜಿಯಂನ ರಯಾನ್‌ಏರ್ ಪೈಲಟ್‌ಗಳು ಮುಷ್ಕರದಿಂದಾಗಿ 96 ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಬೇಸಿಗೆ ಕಾಲದ ಪ್ರವಾಸದ ಸಮಯದಲ್ಲಿ ದಕ್ಷಿಣದ ನಗರಕ್ಕೆ ಪ್ರಯಾಣಿಸುವ ಅಥವಾ ಅಲ್ಲಿಯೇ ವಾಸವಿರುವ 17 ಸಾವಿರ ಜನರಿಗೆ ಇದರಿಂದ ತೊಂದರೆಯಾಗಿದೆ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದೆ.
‘ವಿಮಾನಯಾನ ಸಂಸ್ಥೆ ಬೆಲ್ಜಿಯಂ ಕಾನೂನು ಉಲ್ಲಂಘಿಸಿದೆ. ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿ ಇಟಲಿ, ಫ್ರೆಂಚ್, ಸ್ಪ್ಯಾನಿಷ್ ಸಿಬ್ಬಂದಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ’ ಎಂದು ಪ್ರತಿಭಟನಾನಿರತ ಪೈಲಟ್‌ಗಳು ದೂರಿದ್ದಾರೆ.
ಜುಲೈ 15, 16 ರಂದು ನಡೆದಿದ್ದ ಪ್ರತಿಭಟನೆ ಸಂದರ್ಭ 120 ವಿಮಾನಗಳ ಹಾರಾಟ ರದ್ದುಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.