ADVERTISEMENT

ಭಾರತದಿಂದ ಮಾವು ಆಮದಿಗೆ ದಕ್ಷಿಣ ಆಫ್ರಿಕಾ ಅನುಮತಿ

ಪಿಟಿಐ
Published 19 ಜೂನ್ 2024, 15:25 IST
Last Updated 19 ಜೂನ್ 2024, 15:25 IST
. 
   

ಜೋಹಾನ್ಸ್‌ಬರ್ಗ್ : ಭಾರತದಿಂದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಆಮದುಕೊಳ್ಳಲು ದಕ್ಷಿಣ ಆಫ್ರಿಕಾ ಸರ್ಕಾರ ಅನುಮತಿ ನೀಡಿದೆ. 

ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಸಿಮ್ಮಿ ಉನ್ನಿಕೃಷ್ಣನ್‌ ಅವರು ಕಳೆದ ವಾರ ಜೋಹಾನ್ಸ್‌ಬರ್ಗ್‌ನ ಭಾರತೀಯ ಕಾನ್ಸುಲೇಟ್‌ನಲ್ಲಿ ನಡೆದ ‘ಭಾರತ ಮಾವು ಉತ್ಸವ 2024’ರ‌ಲ್ಲಿ ಭಾರತದ ಮಾವುಗಳಿಗೆ ದಕ್ಷಿಣ ಆಫ್ರಿಕಾ ಅನುಮತಿ ನೀಡಿದ್ದನ್ನು ಘೋಷಿಸಿದರು. 

ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ವಿಶೇಷವಾಗಿ ಮಾವಿನ ರಾಜ ಎಂದು ಕರೆಯಲ್ಪಡುವ ಆಲ್ಫೊನ್ಸೊ, ತೋತಾಪುರಿ, ರಾಜಾಪುರಿ, ಬಾದಾಮಿ, ಕೇಸರ್‌ ಮತ್ತು ನೀಲಂ ತಳಿಯ ಮಾವಿನ ಹಣ್ಣುಗಳನ್ನು ನೀಡಲಾಯಿತು. 

ADVERTISEMENT

ಸ್ಥಳೀಯ ವ್ಯಾಪಾರಿಗಳು ಮತ್ತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಕಳೆದ ವರ್ಷ ನಾವು ಮಾವಿಗೆ ಮಾರುಕಟ್ಟೆ ಪ್ರವೇಶ ಪಡೆದೆವು. ಈಗ ಗುಜರಾತ್‌ನಿಂದ1.5 ಟನ್‌ಗಳಷ್ಟು ಮಾವನ್ನು ಪೂರೈಸುತ್ತಿದ್ದೇವೆ’ ಎಂದರು. 

ಭಾರತವು ವಿಶ್ವದ ಅತಿ ದೊಡ್ಡ ಮಾವು ಉತ್ಪಾದಕ ದೇಶವಾಗಿದ್ದು, ಜಾಗತಿಕ ಉತ್ಪಾದನೆಯ ಶೇ 50ರಷ್ಟು ಪ್ರಮಾಣದ ಮಾವು ಭಾರತದಲ್ಲೇ ಉತ್ಪಾದನೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.