ADVERTISEMENT

OpneAIಗೆ ಮರಳಿದ ಸ್ಯಾಮ್ ಆಲ್ಟ್‌ಮನ್‌: ದೊಡ್ಡ ಡ್ರಾಮಾ ಎಂದ ನೆಟ್ಟಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2023, 9:41 IST
Last Updated 22 ನವೆಂಬರ್ 2023, 9:41 IST
<div class="paragraphs"><p>ಸ್ಯಾಮ್ ಆಲ್ಟ್‌ಮನ್‌</p></div>

ಸ್ಯಾಮ್ ಆಲ್ಟ್‌ಮನ್‌

   REUTERS/CARLOS BARRIA

ಸ್ಯಾನ್‌ಫ್ರಾನ್ಸಿಸ್ಕೊ: ಕೆಲವೇ ದಿನಗಳ ಹಿಂದೆ ಆಡಳಿತ ಮಂಡಳಿ ವಜಾಗೊಳಿಸಿದ್ದರಿಂದ ಮೈಕ್ರೊಸಾಫ್ಟ್‌ ಸೇರಲು ಮುಂದಾಗಿದ್ದ ಚಾಟ್‌ ಜಿಪಿಟಿ ಎಂಬ ಚಾಟ್‌ಬಾಟ್‌ ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್‌, ನಾಟಕೀಯ ಬೆಳವಣಿಗೆಯಲ್ಲಿ ಒಪನ್‌ ಎಐ ಸಿಇಒ ಹುದ್ದೆಗೆ ಮರಳಿದ್ದಾರೆ.

‘ಓಪನ್ ಎಐ ಕಂಪನಿಯ ಸಿಇಒ ಆಗಿ ಸ್ಯಾಮ್ ಆಲ್ಟ್‌ಮನ್‌ ಮರಳಿದ್ದಾರೆ. ಹೊಸ ಆಡಳಿತ ಮಂಡಳಿ ರಚನೆಗೊಂಡಿದ್ದು, ಮಾಜಿ ಸಹ ಸಿಇಒ ಬ್ರೆಟ್‌ ಟೇಲರ್‌, ಅಮೆರಿಕದ ಹಣಕಾಸು ಇಲಾಖೆಯ ಮಾಜಿ ಕಾರ್ಯದರ್ಶಿ ಲ್ಯಾರಿ ಸಮ್ಮರ್ಸ್‌ ಹಾಗೂ ಕೋರಾ ಸಿಇಒ ಆ್ಯಡಮ್ ಡಿಆ್ಯಂಜೆಲೊ ಈ ಮಂಡಳಿಯಲ್ಲಿ ಇದ್ದಾರೆ’ ಎಂದು ಕಂಪನಿ ಹೇಳಿದೆ.

ADVERTISEMENT

ಆಲ್ಟಮನ್ ಅವರು ಆಡಳಿತ ಮಂಡಳಿಗೆ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ ಎಂದು ಆಡಳಿತ ಮಂಡಳಿಯ ಸದಸ್ಯರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಆಲ್ಟ್‌ಮನ್‌ ಅವರನ್ನು ವಜಾಗೊಳಿಸಲಾಗಿತ್ತು. ಆದರೆ ಇದರ ನಡುವೆಯೇ ಓಪನ್‌ಎಐನ ಪ್ರಮುಖ ಹೂಡಿಕೆದಾರ ಕಂಪನಿ ಮೈಕ್ರೊಸಾಫ್ಟ್‌, ಆಲ್ಟಮನ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಮುಂದಾಗಿತ್ತು. ಆಲ್ಟ್‌ಮನ್‌ ಹಾಗೂ ಒಪನ್‌ಎಐನ ಇನ್ನೂ ಕೆಲವು ಸಹೋದ್ಯೋಗಿಗಳು ಮೈಕ್ರೊಸಾಫ್ಟ್ ಸೇರಲಿದ್ದಾರೆ‘ ಎಂದು ಕಂಪನಿ ಘೋಷಿಸಿತು.

ಆಲ್ಟಮನ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಕಂಪನಿಯ 500ಕ್ಕೂ ಹೆಚ್ಚು ಉದ್ಯೋಗಿಗಳು ಆಡಳಿತ ಮಂಡಳಿಯ ಸದಸ್ಯರು ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಆಡಳಿತ ಮಂಡಳಿಯು ಕಳೆದ ಶುಕ್ರವಾರ ಆಲ್ಟ್‌ಮನ್‌ ಅವರನ್ನು ವಜಾಗೊಳಿಸಿದ್ದು ಐಟಿ ಕ್ಷೇತ್ರದಲ್ಲೇ ಸಂಚಲನ ಮೂಡಿಸಿತ್ತು. ಇದೀಗ ಓಪನ್‌ಎಐಗೆ ಮರಳಿರುವ ಸುದ್ದಿಯನ್ನು ಆಲ್ಟ್‌ಮನ್‌ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.