ADVERTISEMENT

ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವಾಗದೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಸೌದಿ

ಏಜೆನ್ಸೀಸ್
Published 7 ಫೆಬ್ರುವರಿ 2024, 12:46 IST
Last Updated 7 ಫೆಬ್ರುವರಿ 2024, 12:46 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ರಿಯಾದ್: ಸ್ವತಂತ್ರವಾದ ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ಸಿಗುವವರೆಗೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧ ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾ, ಅಮೆರಿಕಕ್ಕೆ ಸ್ಪಷ್ಟಪಡಿಸಿದೆ.

‘1967ರ ಗಡಿಗೆ ಅನುಗುಣವಾಗಿ ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ಸಿಗಬೇಕು. ಪೂರ್ವ ಜೆರುಸಲೇಂ ಅದರ ರಾಜಧಾನಿ ಆಗಿರಬೇಕು’ ಎಂದು ಸೌದಿ ಅರೇಬಿಯಾ ಹೇಳಿರುವುದಾಗಿ ಅಲ್ಲಿನ ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.

ADVERTISEMENT

ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣ ಕೊನೆಗೊಳ್ಳಬೇಕು, ಇಸ್ರೇಲ್ ಪಡೆಗಳು ಅಲ್ಲಿಂದ ವಾಪಸ್ಸಾಗಬೇಕು ಎಂದು ಕೂಡ ಸೌದಿ ಅರೇಬಿಯಾ ಹೇಳಿದೆ.

ಸೌದಿ ಅರೇಬಿಯಾ ದೇಶವು ಇಸ್ರೇಲ್‌ ದೇಶಕ್ಕೆ ಯಾವತ್ತೂ ಮಾನ್ಯತೆ ನೀಡಿಲ್ಲ. ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವಿನ ಸಂಬಂಧ ಸುಧಾರಣೆ ಕುರಿತ ಮಾತುಕತೆಗಳು ನಡೆಯುತ್ತಿವೆ, ಮಾತುಕತೆಗಳನ್ನು ಮುಂದುವರಿಸಲು ಎರಡೂ ದೇಶಗಳಿಗೆ ಒಪ್ಪಿಗೆ ಇದೆ ಎಂದು ಅಮೆರಿಕದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಸೌದಿ ಅರೇಬಿಯಾ ಈ ಸ್ಪಷ್ಟನೆ ನೀಡಿದೆ.

ಇಸ್ರೇಲ್‌ಗೆ ಮಾನ್ಯತೆ ನೀಡಬೇಕು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸೌದಿ ಅರೇಬಿಯಾ ಮೇಲೆ ಒತ್ತಡ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.