ADVERTISEMENT

ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:01 IST
Last Updated 21 ಅಕ್ಟೋಬರ್ 2024, 14:01 IST
ಫೆಥುಲ್ಹಾ ಗುಲೇನ್‌
ಫೆಥುಲ್ಹಾ ಗುಲೇನ್‌   

ಸೇಯ್‌ಲರ್ಸ್‌ಬರ್ಗ್‌: ತನ್ನ ದೇಶ ಟರ್ಕಿಯನ್ನು ತೊರೆದು ಅಮೆರಿಕದಲ್ಲಿ ವಾಸಿಸುತ್ತಿದ್ದ ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನರಾದರು. ಟರ್ಕಿಯಲ್ಲಿ 2016ರಲ್ಲಿ ವಿಫಲ ದಂಗೆ ಉಂಟಾಗಿತ್ತು. ಅದರ ‘ಮಾಸ್ಟರ್‌ ಮೈಂಡ್‌’ ಎಂಬ ಆರೋಪವನ್ನು ಗುಲೇನ್‌ ಎದುರಿಸುತ್ತಿದ್ದರು. 

ಸುಮಾರು 80 ವರ್ಷ ವಯಸ್ಸಿನ ಗುಲೇನ್‌ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗುಲೇನ್‌ ಅವರ ಸಾವನ್ನು ಗುಪ್ತಚರ ಮೂಲಗಳು ಖಚಿತಪಡಿಸಿವೆ ಎಂದು ಟರ್ಕಿಯ ವಿದೇಶಾಂಗ ಸಚಿವ ಹಕನ್‌ ಫಿದಾನ್‌ ಅವರನ್ನು ಉಲ್ಲೇಖಿಸಿ ಸರ್ಕಾರಿ ಸುದ್ದಿಸಂಸ್ಥೆ ತಿಳಿಸಿದೆ.

ಅಮೆರಿಕದ ಪೆನ್‌ಸಿಲ್ವೇನಿಯಾದಲ್ಲಿ ವಾಸಿಸುತ್ತಿದ್ದ ಗುಲೇನ್‌, ಪ್ರಪಂಚದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.