ADVERTISEMENT

ಕುವೈತ್: ಅವಿವಾಹಿತರಿಗೆ ಶುರುವಾಯ್ತು ವಸತಿ ಸಮಸ್ಯೆ

ಪಿಟಿಐ
Published 17 ಜೂನ್ 2024, 16:15 IST
Last Updated 17 ಜೂನ್ 2024, 16:15 IST
ಕುವೈತ್‌ನಲ್ಲಿ ಬೆಂಕಿ ಅನಾಹುತಕ್ಕೆ ಈಡಾಗಿದ್ದ ಕಟ್ಟಡ –ಪಿಟಿಐ ಚಿತ್ರ
ಕುವೈತ್‌ನಲ್ಲಿ ಬೆಂಕಿ ಅನಾಹುತಕ್ಕೆ ಈಡಾಗಿದ್ದ ಕಟ್ಟಡ –ಪಿಟಿಐ ಚಿತ್ರ   

ಕುವೈತ್: ನಿಯಮಗಳನ್ನು ಅನುಸರಿಸದ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವ ವಿದೇಶೀಯರನ್ನು ಅದರಲ್ಲೂ ವಿಶೇಷವಾಗಿ ಅವಿವಾಹಿತರನ್ನು ಕುವೈತ್‌ನ ಮನೆಗಳಿಂದ ಹೊರಹಾಕುವ ಪ್ರಕ್ರಿಯೆ ಶುರುವಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. 

ಬಿನೀದ್ ಅಲ್–ಗರ್ ಪ್ರದೇಶದಲ್ಲಿ ಮೂರು ಕಟ್ಟಡಗಳು ನಿಯಮಗಳಿಗೆ ಅನುಸಾರವಾಗಿ ಇಲ್ಲ ಎಂದು ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ‘ಅರಬ್ ಟೈಮ್ಸ್’ ಪತ್ರಿಕೆ ವರದಿಯಲ್ಲಿ ತಿಳಿಸಿದೆ. 

ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ 46 ಭಾರತೀಯರೂ ಸೇರಿ 50 ಮಂದಿ ಇತ್ತೀಚೆಗೆ ಮೃತಪಟ್ಟಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. 

ADVERTISEMENT

ಬೆಂಕಿ ಅವಘಡ ಸಂಭವಿಸಿದ ಕಟ್ಟಡದಲ್ಲಿ 196 ಕಾರ್ಮಿಕರು ವಾಸ ಮಾಡುತ್ತಿದ್ದರು. ಅವರಲ್ಲಿ ಭಾರತೀಯರ ಸಂಖ್ಯೆ ಹೆಚ್ಚಾಗಿತ್ತು. ಮತ್ತೆ ಅಂತಹ ಅನಾಹುತ ಸಂಭವಿಸಕೂಡದು ಎಂದು ಮುಂಜಾಗ್ರತಾ ಕ್ರಮವಾಗಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳಿಂದ ನೌಕರರನ್ನು ಹೊರಗೆ ಹಾಕಲಾಗುತ್ತಿದೆ. ಅನೇಕರು ನೆಲೆಯಿಲ್ಲದೆ ರಸ್ತೆ ಬದಿಯಲ್ಲಿ ಮಲಗುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದೂ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.