ಜೆರುಸೆಲಂ: ಗಾಜಾದಲ್ಲಿ ಸೆರೆಯಾಗಿದ್ದ 135 ಮಂದಿ ಒತ್ತೆಯಾಳುಗಳ ಪೈಕಿ 19 ಜನ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಪಡೆ ಹೇಳಿದೆ. ಮಂಗಳವಾರ ಇಬ್ಬರು ಒತ್ತೆಯಾಳುಗಳ ಮೃತದೇಹವನ್ನು ಪತ್ತೆ ಮಾಡಿದ ಬಳಿಕ ಈ ಮಾಹಿತಿ ಹೊರಬಿದ್ದಿದೆ.
ಮೃತರಲ್ಲಿ ತಾಂಜೇನಿಯಾ ಪ್ರಜೆಗಳು ಸೇರಿದ್ದಾರೆ ಎಂದು ಸರ್ಕಾರಿ ಪತ್ರಿಕಾ ಕಚೇರಿ ಹೇಳಿದೆ. ಆದರೆ, ಅವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಂಜೇನಿಯಾ, ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿಕೊಂಡ ಸುಮಾರು 240 ಜನರಲ್ಲಿ ಇಬ್ಬರು ಕೃಷಿ ವಿದ್ಯಾರ್ಥಿಗಳು ಸೇರಿದ್ದಾರೆ. ಕಳೆದ ತಿಂಗಳು ಒಬ್ಬರು ಸತ್ತಿರುವುದು ದೃಢಪಟ್ಟಿದೆ ಎಂದು ಹೇಳಿದೆ.
ಕದನ ವಿರಾಮಕ್ಕೆ ಭಾರತ ಸಹಮತ
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್–ಹಮಾಸ್ ಸಂಘರ್ಷಕ್ಕೆ ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನವಿರಾಮ ಘೋಷಣೆ ಹಾಗೂ ಒತ್ತೆಯಾಳುಗಳ ಬೇಷರತ್ ಬಿಡುಗಡೆಗೆ ಒತ್ತಾಯಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕರಡು ನಿರ್ಣಯದ ಪರ ಭಾರತ ಮತ ಚಲಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.