ADVERTISEMENT

ಲೆಬನಾನ್‌, ಗಾಜಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 11 ಜನ ಸಾವು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 14:32 IST
Last Updated 23 ನವೆಂಬರ್ 2024, 14:32 IST
<div class="paragraphs"><p>ಲೆಬನಾನ್‌ನ ಬೈರೂತ್‌ ಮೇಲೆ ಶನಿವಾರ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಿಂದಾಗಿ ದಟ್ಟ ಹೊಗೆ ಆವರಿಸಿದ ದೃಶ್ಯ&nbsp;</p></div>

ಲೆಬನಾನ್‌ನ ಬೈರೂತ್‌ ಮೇಲೆ ಶನಿವಾರ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಿಂದಾಗಿ ದಟ್ಟ ಹೊಗೆ ಆವರಿಸಿದ ದೃಶ್ಯ 

   

ಬೈರೂತ್‌ : ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದು, 63 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಘಟನೆ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಡಿಎನ್‌ಎ ಪರೀಕ್ಷೆ ಮೂಲಕ ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ. ಒಂದು ವಾರದ ಅವಧಿಯಲ್ಲಿ ಬೈರೂತ್‌ ಮೇಲೆ ಇಸ್ರೇಲ್‌ ನಡೆಸಿದ ನಾಲ್ಕನೆಯ ದಾಳಿ ಇದಾಗಿದೆ’ ಎಂದು ಲೆಬನಾನ್‌ನ ಆರೋಗ್ಯ ಸಚಿವರು ತಿಳಿಸಿದರು. 

ADVERTISEMENT

ಈವರೆಗೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಲೆಬನಾನ್‌ನ 3,500 ಜನರು ಸಾವಿಗೀಡಾಗಿದ್ದು, 15,000 ಜನರು ಗಾಯಗೊಂಡಿದ್ದಾರೆ. ಅಲ್ಲದೇ 12 ಲಕ್ಷ, ಅಥವಾ ಲೆಬನಾನ್‌ನ ಒಟ್ಟು ಜನಸಂಖ್ಯೆಯ ಶೇ25ರಷ್ಟು ಜನರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. 

ಉತ್ತರ ಇಸ್ರೇಲ್‌ ಮೇಲೆ ಲೆಬನಾನ್‌ ನಡೆಸಿದ ಡ್ರೋನ್‌, ಕ್ಷಿಪಣಿ ಹಾಗೂ ರಾಕೆಟ್‌ ದಾಳಿಯಲ್ಲಿ 50 ಜನ ನಾಗರಿಕರು ಹಾಗೂ 90 ಇಸ್ರೇಲಿ ಸೈನಿಕರು ಸಾವಿಗೀಡಾಗಿದ್ದಾರೆ. 

ಗಾಜಾದಲ್ಲಿ 6 ಮಂದಿ ಬಲಿ:

ಗಾಜಾ ಮೇಲೆಯೂ ಇಸ್ರೇಲ್‌ ದಾಳಿ ಮುಂದುವರಿದಿದ್ದು, ಶನಿವಾರ ಖಾನ್‌ ಯೂನಿಸ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ 6 ಜನರು ಸಾವಿಗೀಡಾಗಿದ್ದಾರೆ.

ಕಳೆದ 13 ತಿಂಗಳುಗಳಿಂದ ನಡೆಯುತ್ತಿರುವ ಹಮಾಸ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧದಲ್ಲಿ ಈವರೆಗೆ ಒಟ್ಟು 44,000 ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.  

ಈವರೆಗೆ ತಾನು 17,000 ಬಂಡುಕೋರರನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.