ನ್ಯೂಯಾರ್ಕ್: ನ್ಯೂಯಾರ್ಕ್‌ನ ಬ್ರೂಕ್ಲಿನ್ ಸಬ್‌ವೇ ಸ್ಟೇಷನ್‌ನಲ್ಲಿ ಮಂಗಳವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿದ್ದು, ಐದು ಮಂದಿ ಗುಂಡೇಟು ತಗುಲಿದೆ.
'ಸನ್‌ಸೆಟ್ ಪಾರ್ಕ್ ಸಮೀಪದ ನಿಲ್ದಾಣದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಅಲ್ಲಿ ಹಲವು ಜನರಿಗೆ ಗುಂಡೇಟು ಬಿದ್ದಿತ್ತು ಹಾಗೂ ಸ್ಫೋಟಕ ಸಾಧನಗಳು ಪತ್ತೆಯಾಗಿವೆ' ಎಂದು ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆ ವಕ್ತಾರರು ಹೇಳಿದ್ದಾರೆ.
ಗುಂಡಿನ ದಾಳಿ ನಡೆಸಿರುವ ಹಂತಕ ಕಟ್ಟಡ ಕಾಮಗಾರಿ ಸಿಬ್ಬಂದಿಗಳು ಬಳಸುವಂತಹ ನಡುವಂಗಿ ಹಾಗೂ ಗ್ಯಾಸ್ ಮಾಸ್ಕ್ ಧರಿಸಿದ್ದರ ಬಗ್ಗೆ ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.
ರಕ್ತಸಿಕ್ತರಾಗಿದ್ದ ಪ್ರಯಾಣಿಕರು ನಿಲ್ದಾಣದ ನೆಲದ ಮೇಲೆ ಬಿದ್ದಿರುವುದು ಫೋಟೊವೊಂದರಲ್ಲಿ ಕಂಡು ಬಂದಿದೆ. 13 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಗುಂಡೇಟು ಬಿದ್ದಿರುವವರ ಸ್ಥಿತಿಯ ಬಗ್ಗೆ ತಿಳಿದು ಬಂದಿಲ್ಲ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.