ಸ್ಯಾನ್ ಫ್ರಾನ್ಸಿಸ್ಕೊ: ಗೂಗಲ್ ಕಂಪನಿ ತೊರೆಯಲು ಮಾಜಿ ಕಾರ್ಯನಿರ್ವಾಹಕ ಅಮಿತ್ ಸಿಂಘಾಲ್‌ಗೆ 35 ಮಿಲಿಯನ್ ಡಾಲರ್ (₹243.96 ಕೋಟಿ) ನೀಡಲಾಗಿತ್ತು ಎನ್ನುವ ಅಂಶ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳಿಂದ ಬಹಿರಂಗಗೊಂಡಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಬಳಿಕ ಬಲವಂತದಿಂದ ಅಮಿತ್ ಅವರಿಂದ ರಾಜೀನಾಮೆ ಪಡೆಯಲಾಗಿತ್ತು.
ಕಂಪನಿ ವಿರುದ್ಧ ಷೇರುದಾರರ ಪರವಾಗಿ ಹೂಡಲಾಗಿದ್ದ ಮೊಕದ್ದಮೆ ವಿಚಾರಣೆ ಸಂದರ್ಭದಲ್ಲಿ ಕಂಪನಿ ತೊರೆಯಲು ಅಮಿತ್ ಅವರಿಗೆ ನೀಡಲಾದ ಪರಿಹಾರದ ಪ್ಯಾಕೇಜ್ ವಿಷಯ ಗೊತ್ತಾಗಿದೆ.
2016ರಲ್ಲಿ ಅಮಿತ್ ಗೂಗಲ್ ಕಂಪನಿ ತೊರೆದಿದ್ದರು. 15 ಮಿಲಿಯನ್ ಡಾಲರ್ ಮೊತ್ತವನ್ನು ಎರಡು ಬಾರಿ ಮತ್ತು ಒಂದು ಬಾರಿ 5 ಮಿಲಿಯನ್ ಡಾಲರ್ ಅನ್ನು ಅಮಿತ್ ಅವರಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.