ADVERTISEMENT

ಬೈಡನ್‌ಗೆ ಭಾರತ ಮೂಲದ ಅಮೆರಿಕನ್ನರ ಬೆಂಬಲ ಕುಸಿತ

ಪಿಟಿಐ
Published 11 ಜುಲೈ 2024, 5:56 IST
Last Updated 11 ಜುಲೈ 2024, 5:56 IST
ಜೋ ಬೈಡನ್‌
ಜೋ ಬೈಡನ್‌   

ವಾಷಿಂಗ್ಟನ್‌: ಹಿಂದಿನ ಚುನಾವಣೆಯಿಂದ ಹಿಡಿದು ಪ್ರಸಕ್ತ ಚುನಾವಣೆಯ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಬೆಂಬಲಿಸುವ ಭಾರತೀಯ ಅಮೆರಿಕನ್ನರ ಸಂಖ್ಯೆಯಲ್ಲಿ ಶೇ 19ರಷ್ಟು ಕುಸಿತ ಕಂಡಿದೆ ಎಂದು ದ್ವೈವಾರ್ಷಿಕ ಏಷ್ಯನ್ ಅಮೆರಿಕನ್ ವೋಟರ್ ಸಮೀಕ್ಷೆ(ಎಎವಿಎಸ್‌) ತಿಳಿಸಿದೆ.

ಏಷ್ಯನ್ ಮತ್ತು ಪೆಸಿಫಿಕ್ ಐಲ್ಯಾಂಡರ್ ಅಮೇರಿಕನ್ ವೋಟ್, ಎಎಪಿಐ, ಏಷ್ಯನ್ ಅಮೆರಿಕನ್ಸ್ ಅಡ್ವಾನ್ಸಿಂಗ್ ಜಸ್ಟೀಸ್ ಮತ್ತು ಎಎಆರ್‌ಪಿ ಈ ಸಮೀಕ್ಷೆ ನಡೆಸಿದೆ.

2020ರಲ್ಲಿ ಶೇ 65ರಷ್ಟು ಭಾರತೀಯ ಅಮೆರಿಕನ್ನರು ಬೈಡನ್ ಅವರಿಗೆ ಬೆಂಬಲ ನೀಡಿದ್ದು, ಈ ಬಾರಿ ಶೇ 46ರಷ್ಟು ಭಾರತೀಯ ಅಮೆರಿಕನ್ನರು ಬೈಡನ್‌ಗೆ ಮತ ಹಾಕಲು ಉದ್ದೇಶಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರತಿಸ್ಪರ್ಧಿ ಟ್ರಂಪ್ ಅವರಿಗೆ 2020ರ ಚುನಾವಣೆ ಶೇ 28ರಷ್ಟು ಭಾರತೀಯ ಅಮೆರಿಕನ್ನರು ಮತಚಲಾಯಿಸಿದ್ದು, ಈ ಬಾರಿ ಶೇ 30ರಷ್ಟು ಭಾರತೀಯ ಅಮೆರಿಕನ್ನರು ಬೆಂಬಲ ನೀಡಲು ಉದ್ದೇಶಿಸಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಕೆಲವೊಂದು ಮತಕ್ಷೇತ್ರದಲ್ಲಿ ಭಾರತೀಯ ಅಮೆರಿಕನ್ನರ ಮತವು ನಿರ್ಣಾಯಕವಾಗಿದ್ದು, ಬೆಂಬಲದಲ್ಲಿನ ಕುಸಿತ ಅಭ್ಯರ್ಥಿಯ ಗೆಲುವಿನ ಮೇಲೆ ಪರೋಕ್ಷ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.