ಟೋಕಿಯೊ: ಜಪಾನ್ ಮಾಜಿ ಪ್ರಧಾನಿ ಶಿಂಜೊಅಬೆ ಅವರನ್ನು ಆರೋಪಿ ತಾನೇತಯಾರಿಸಿದ (ಹ್ಯಾಂಡ್‌ಮೇಡ್) ಬಂದೂಕಿನಿಂದ ಹತ್ಯೆಗೈದಿದ್ದಾನೆಎಂದು ಜಪಾನ್ ಪೊಲೀಸ್ ಶುಕ್ರವಾರ ತಿಳಿಸಿದೆ.
ಶಂಕಿತ ಆರೋಪಿಯನ್ನು 41 ವರ್ಷದ ತೆತ್ಸುಯಾ ಯಮಾಗಾಮಿ ಎಂದು ಗುರುತಿಸಲಾಗಿದೆ. ಈತ ನಿರುದ್ಯೋಗಿ ಎಂದು ತಿಳಿಸಿದೆ.
ಇದನ್ನೂ ಓದಿ:ಫೇಸ್‌ಬುಕ್, ಟ್ವಿಟರ್ನಿಂದ ಶಿಂಜೊ ಅಬೆ ಹತ್ಯೆ ವಿಡಿಯೊ ತೆರವು
ದಾಳಿಗೆ ಬಳಸಿದ್ದ ಬಂದೂಕನ್ನು ಆರೋಪಿ ತಾನೇ ತಯಾರಿಸಿಕೊಂಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ನಾರಾ ಪ್ರದೇಶದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾರಾ ಎಂಬಲ್ಲಿ ಶಿಂಜೊ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ದುಷ್ಕರ್ಮಿ, ಹಿಂದಿನಿಂದ ಬಹಳ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಹಂತಕನ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದೂ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.