ADVERTISEMENT

ಟೊಕಿಯೊ ತಲುಪಿದ ಶಿಂಜೊ ಅಬೆ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 12:05 IST
Last Updated 9 ಜುಲೈ 2022, 12:05 IST
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ನಿಧನದ ಶೋಕ ಸೂಚಕವಾಗಿ ಭಾರತದಲ್ಲಿ ಶನಿವಾರ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು. ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿಯ ದೃಶ್ಯವನ್ನು ಚಿತ್ರದಲ್ಲಿ ಕಾಣಬಹುದು  –ಪಿಟಿಐ ಚಿತ್ರ
ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ನಿಧನದ ಶೋಕ ಸೂಚಕವಾಗಿ ಭಾರತದಲ್ಲಿ ಶನಿವಾರ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು. ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿಯ ದೃಶ್ಯವನ್ನು ಚಿತ್ರದಲ್ಲಿ ಕಾಣಬಹುದು  –ಪಿಟಿಐ ಚಿತ್ರ   

ಟೋಕಿಯೊ:ದೇಶದ ಪಶ್ಚಿಮ ಭಾಗದ ಚುನಾವಣಾ ಪ್ರಚಾರ ಸಭೆಯಲ್ಲಿ ಶುಕ್ರವಾರ ಗುಂಡಿನ ದಾಳಿಗೆ ಬಲಿಯಾದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಪಾರ್ಥಿವ ಶರೀರವನ್ನು ಶನಿವಾರ ಟೋಕಿಯೊಗೆ ತರಲಾಯಿತು.

ಅಬೆ ಪಾರ್ಥೀವ ಶರೀರವನ್ನು ಕಪ್ಪು ಬಣ್ಣದ ವಾಹನದಲ್ಲಿ ಟೋಕಿಯೊದ ಶಿಬುಯಾ ವಸತಿ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಅವರ ಪತ್ನಿ ಅಕೀ ಸಹ ಜೊತೆಯಲ್ಲಿದ್ದರು. ವಾಹನ ಸಾಗುತ್ತಿದ್ದಂತೆ ರಸ್ತೆ ಬದಿ ನಿಂತಿದ್ದವರು ತಲೆ ತಗ್ಗಿಸಿ, ಗೌರವ ಸಲ್ಲಿಸಿದರು.

ಭಾನುವಾರದ ಸಂಸತ್ ಚುನಾವಣೆಗೆ ಮುನ್ನ ಅಬೆ ಹತ್ಯೆ ದೇಶವನ್ನು ಬೆಚ್ಚಿ ಬೀಳಿಸಿದೆ. ಮಾಜಿ ಪ್ರಧಾನಿಯ ಭದ್ರತೆ ಸಮರ್ಪಕವಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತು.

ADVERTISEMENT

ಅಬೆಗೆ ತಗುಲಿದ ಗುಂಡು, ಎರಡೂ ಕಾಲರ್ ಮೂಳೆಗಳ ಕೆಳಗಿರುವ ಅಪಧಮನಿ ಹಾನಿಗೊಳಿಸಿ, ಬೃಹತ್ ರಕ್ತಸ್ರಾವ ಉಂಟುಮಾಡಿರುವುದು ಶವ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ನಾರಾ ನಗರದಲ್ಲಿ ಅಬೆ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ತಕ್ಷಣ ಅವರನ್ನು ಹೆಲಿಕಾಪ್ಟರ್‌ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.