ಬರ್ಲಿನ್/ಲಿಸ್ಬನ್: ಜರ್ಮನಿಯಿಂದ ಪೋರ್ಷೆ, ಔಡಿ ಮತ್ತು ಬೆಂಟ್ಲೆ ಕಾರುಗಳನ್ನು ಅಮೆರಿಕಕ್ಕೆ ಸಾಗಿಸುತ್ತಿದ್ದ ಹಡಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಫೋಕ್ಸ್ವ್ಯಾಗನ್ ಕಂಪನಿಯ ವಕ್ತಾರರೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಪೋರ್ಚುಗಲ್ನ ಅಜೋರ್ಸ್ ದ್ವೀಪಗಳ ಕರಾವಳಿ ಬಳಿ ಈ ಘಟನೆ ಸಂಭವಿಸಿದೆ. ಹಡಗಿನಲ್ಲಿದ್ದ 22 ಸಿಬ್ಬಂದಿಯನ್ನು ಬುಧವಾರ ಸ್ಥಳಾಂತರಿಸಲಾಗಿದೆ, ಯಾರಿಗೂ ಗಾಯವಾಗಿಲ್ಲ ಎಂದು ಪೋರ್ಚುಗಲ್ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಕಾರುಗಳಿಗೆ ಹಾನಿ ಆಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.