ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ನ ಬ್ರಿಯಾನ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಯಾನ್‌ನ ‘ಕೆಂಟ್ ಮೂರ್ ಕ್ಯಾಬಿನೆಟ್ಸ್’ ಕಂಪನಿಯ ಆವರಣದಲ್ಲಿ ದಾಳಿ ನಡೆದಿದೆ.
ದಾಳಿಕೋರ ‘ಕೆಂಟ್ ಮೂರ್ ಕ್ಯಾಬಿನೆಟ್ಸ್’ನ ಉದ್ಯೋಗಿ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ದಾಳಿಕೋರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಬ್ರಿಯಾನ್ ಪೊಲೀಸ್ ಮುಖ್ಯಸ್ಥ ಎರಿಕ್ ಬಸ್ಕೆ ತಿಳಿಸಿದ್ದಾರೆ.
ಕಂಪನಿಯ ಉದ್ಯೋಗಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಒಬ್ಬರು ಪ್ರತ್ಯಕ್ಷದರ್ಶಿ ಶಂಕಿತನನ್ನು ಗುರುತಿಸಿದ್ದಾರೆ. ಆತನಿಗಾಗಿ ಶೋಧ ನಡೆಯುತ್ತಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಜೇಸನ್ ಜೇಮ್ಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.