ಲಂಡನ್: ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕವು ಇದೇ ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ರಾಜನಿಗೆ ತೊಡಿಸುವ ಕಿರೀಟದ ಅಳತೆಯನ್ನು ಬದಲಿಸಲಾಗಿದೆ. 70 ವರ್ಷಗಳಲ್ಲೇ ಅತ್ಯಂತ ಅದ್ಧೂರಿಯಾಗಿ ನಡೆಯಲಿರುವ ಸೇನಾ ಮೆರವಣಿಗೆಗೆ ಬ್ರಿಟನ್ ಸೇನೆ ಸಿದ್ಧವಾಗುತ್ತಿದೆ. ರಾಜನ ಮೆರವಣಿಗೆಗೆ ಚಿನ್ನದ ಸಾರೋಟು ಕೂಡಾ ಸಿದ್ಧವಾಗಿದೆ.
ಅಧಿಕಾರದ ಚಿಹ್ನೆಗಳಾದ ದಂಡ ಮತ್ತಿತರ ವಸ್ತುಗಳನ್ನು ಚಾರ್ಲ್ಸ್ ಅವರಿಗೆ ಧಾರ್ಮಿಕ ಗುರುಗಳು ಹಸ್ತಾಂತರಿಸಲಿದ್ದಾರೆ. ವಾದ್ಯ ತಂಡಗಳು ಮತ್ತು ಕರಡಿ ತುಪ್ಪಳದ ಟೋಪಿ ಧರಿಸಿದ ತಂಡಗಳು ಲಂಡನ್ ಬೀದಿಗಳಲ್ಲಿ ಮೆರವಣಿಗೆ ನಡೆಸಲಿವೆ.
ರಾಜ ಮತ್ತು ರಾಣಿ ಬಕ್ಕಿಂಗ್‌ಹ್ಯಾಮ್ ಅರಮನೆಯ ಬಾಲ್ಕನಿಯಲ್ಲಿ ನಿಂತು ಜನರತ್ತ ಕೈಬೀಸುವುದರೊಂದಿಗೆ ಈ ಸಮಾರಂಭ ಮುಕ್ತಾಯವಾಗಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.