ಸಿಂಗಾಪುರ: ಭಾರತದ ಕೋವಿಡ್–19 ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಸಿಂಗಾಪುರವು ಮೊದಲ ಹಂತದ ವೈದ್ಯಕೀಯ ಆಮ್ಲಜನಕ (ಆಕ್ಸಿಜನ್) ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದೆ.
ಸಿಂಗಾಪುರ ಗಣರಾಜ್ಯದ ವಾಯುಪಡೆಯ ಎರಡು ‘ಸಿ–130’ ವಿಮಾನಗಳಲ್ಲಿ ಸಿಲಿಂಡರ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಹೇಳಿರುವುದಾಗಿ ‘ಚಾನೆಲ್ ನ್ಯೂಸ್ ಏಷ್ಯಾ’ ವರದಿ ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಮಾಲಿಕಿ ಉಸ್ಮಾನ್ ಅವರು ಪಯಾ ಲೆಬಾರ್ ವಾಯುನೆಲೆಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಭಾರತೀಯ ರಾಯಭಾರಿ ಪಿ.ಕುಮಾರನ್ ಅವರಿಗೆ ಬುಧವಾರ ಬೆಳಿಗ್ಗೆ ಹಸ್ತಾಂತರಿಸಿದ್ದಾರೆ.
‘ಈ ಸಾಂಕ್ರಾಮಿಕವು ಗಡಿಗಳನ್ನೂ ಮೀರಿ ಹೇಗೆ ಅಪಾಯಕಾರಿಯಾಗಿದೆ ಎಂಬುದನ್ನು ನಾವೆಲ್ಲ ಕಳೆದ ವರ್ಷ ನೋಡಿದ್ದೇವೆ. ಇದಕ್ಕೆ ದೇಶ, ರಾಷ್ಟ್ರೀಯತೆ, ಜನಾಂಗ ಎಂಬುದಿಲ್ಲ. ಹಾಗಾಗಿ ನಾವೆಲ್ಲ ಪರಸ್ಪರ ಬೆಂಬಲದೊಂದಿಗೆ ಸಾಮೂಹಿಕವಾಗಿ ಹೋರಾಡಬೇಕು’ ಎಂದು ಮಾಲಿಕಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.