ADVERTISEMENT

ಬೇಗ ಮಕ್ಕಳನ್ನು ಪಡೆಯಿರಿ: ಸಿಂಗಪುರ ದಂಪತಿಗಳಿಗೆ ಪ್ರಧಾನಿ ಲೀ ಮನವಿ

ಪಿಟಿಐ
Published 9 ಫೆಬ್ರುವರಿ 2024, 6:51 IST
Last Updated 9 ಫೆಬ್ರುವರಿ 2024, 6:51 IST
<div class="paragraphs"><p>ಸಿಂಗಪುರ ಪ್ರಧಾನ ಮಂತ್ರಿ ಲೀ ಸಿಯೆನ್‌ ಲೂಂಗ್‌</p></div>

ಸಿಂಗಪುರ ಪ್ರಧಾನ ಮಂತ್ರಿ ಲೀ ಸಿಯೆನ್‌ ಲೂಂಗ್‌

   

ಸಿಂಗಪುರ: ಸಿಂಗಪುರದಲ್ಲಿ ಚೀನಾ ಹೊಸವರ್ಷ ‘ಡ್ರ್ಯಾಗನ್‌’ ಸ್ವಾಗತಕ್ಕೆ ಅಲ್ಲಿನ ಜನ ಸಜ್ಜಾಗಿದ್ದಾರೆ. ಈ ವರ್ಷದಲ್ಲಿ ಮಕ್ಕಳು ಹುಟ್ಟಿದರೆ ಮಂಗಳಕರ ಎನ್ನುವ ನಂಬಿಕೆ ಇದೆ. ಈ ಕಾರಣದಿಂದ ಪ್ರಧಾನ ಮಂತ್ರಿ ಲೀ ಸಿಯೆನ್‌ ಲೂಂಗ್‌ ಅವರು ಈ ವರ್ಷ ಮಕ್ಕಳನ್ನು ಪಡೆಯುವಂತೆ ಸಿಂಗಪುರದ ದಂಪತಿಗಳಿಗೆ ಮನವಿ ಮಾಡಿದ್ದಾರೆ.

ಚೀನಾ ಹೊಸ ವರ್ಷದ ವಾರ್ಷಿಕ ಸಂದೇಶ ನೀಡುವ ವೇಳೆ ಮಾತನಾಡಿದ ಅವರು, ‘ಡ್ರ್ಯಾಗನ್‌ ವರ್ಷ ಎನ್ನುವುದು ಶಕ್ತಿ ಮತ್ತು ಅದೃಷ್ಟದ ಸಂಕೇತವಾಗಿದೆ. ಹಾಗಾಗಿ ಯುವ ಜೋಡಿಗಳು ನಿಮ್ಮ ಕುಟುಂಬಕ್ಕೆ ‘ಪುಟ್ಟ ಡ್ರ್ಯಾಗನ್’ ಅನ್ನು ಸೇರಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಕುಟುಂಬಕ್ಕೆ ನಮ್ಮ (ಸರ್ಕಾರ) ಬೆಂಬಲವಿದೆ’ ಎಂದರು.

ADVERTISEMENT

ನಾವು ‘ಸಿಂಗಪುರ್ ಮೇಡ್ ಫಾರ್ ಫ್ಯಾಮಿಲಿಸ್’ ಅನ್ನು ನಿರ್ಮಿಸುತ್ತೇವೆ. ಮುಂದೆಯೂ ನಿಮ್ಮ ಮದುವೆ ಮತ್ತು ಪೋಷಕತ್ವದ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ. ಎಂದು ಲೀ ಹೇಳಿರುವುದಾಗಿ ಚಾನೆಲ್ ನ್ಯೂಸ್ ಏಷ್ಯಾ ಹೇಳಿದೆ.

ಅಂತಿಮವಾಗಿ, ದಂಪತಿ ತಮ್ಮದೇ ಆದ ಕಾರಣಗಳಿಗಾಗಿ ಮಕ್ಕಳನ್ನು ಯಾವಾಗ ಪಡೆಯಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಹೆಚ್ಚಿನವರು ತಂದೆಯಾಗುವ ಅನುಭವವನ್ನು ಬೇಗ ಪಡೆಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಅಲ್ಲದೆ, ಶಿಶುಪಾಲನೆ ಮತ್ತು ಉದ್ಯೋಗ ಜೀವನದ ನಡುವೆ ಹೊಂದಾಣಿಕೆ ಇರಲಿ ಎನ್ನುವ ಕಾರಣಕ್ಕೆ ಇತ್ತೀಚೆಗೆ ಸರ್ಕಾರದಿಂದ ಪಾವತಿಸುವ ಪಿತೃತ್ವ ರಜೆಯನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಎರಡು ವಾರಗಳಿಂದ ನಾಲ್ಕು ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸಿಂಗಪುರವು ಫೆಬ್ರುವರಿ 10-11 ರಂದು ಚೈನೀಸ್ ಹೊಸ ವರ್ಷ ಆಚರಿಸಲು ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.