ಸಿಂಗಪುರ: ಭಾರತೀಯ ಮೂಲದ ಸಿಂಗಪುರದ ಮಾಜಿ ಸಾರಿಗೆ ಸಚಿವ ಎಸ್.ಈಶ್ವರನ್ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ವಿಧಿಸಿದ್ದ ಒಂದು ವರ್ಷ ಕಾರಾಗೃಹ ಶಿಕ್ಷೆಯು ಸೋಮವಾರದಿಂದ ಆರಂಭವಾಗಿದೆ.
ಏಳು ವರ್ಷಗಳಲ್ಲಿ ಇಬ್ಬರು ಉದ್ಯಮಿಗಳಿಂದ ₹2.50 ಕೋಟಿಗೂ ಅಧಿಕ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದ ಮತ್ತು ನ್ಯಾಯಿಕ ಪ್ರಕ್ರಿಯೆಗೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಈಶ್ವರನ್ ಅವರನ್ನು ಗುರುವಾರ ಬಂಧಿಸಲಾಗಿತ್ತು.
‘ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ’ ಎಂದು ಅವರು ಭಾನುವಾರ ಫೇಸ್‌ಬುಕ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಜೊತೆಗೆ, ‘ಸಾರ್ವಜನಿಕ ಹುದ್ದೆಯಲ್ಲಿದ್ದುಕೊಂಡು ನಾನು ಮಾಡಿರುವುದು ಅಪರಾಧ. ಇದಕ್ಕಾಗಿ ದೇಶದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದೂ ಹೇಳಿದ್ದಾರೆ.
ಸೆಪ್ಟೆಂಬರ್ 24ರಂದು ಅವರನ್ನು ಕೋರ್ಟ್ ದೋಷಿ ಎಂದು ತೀರ್ಮಾನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.