ADVERTISEMENT

ದ್ವಿಪಕ್ಷೀಯ ರಕ್ಷಣಾ ಸಹಕಾರ; ಶ್ರೀಲಂಕಾ ತಲುಪಿದ ಭಾರತದ 6 ಯುದ್ಧನೌಕೆಗಳು

ಪಿಟಿಐ
Published 25 ಅಕ್ಟೋಬರ್ 2021, 8:23 IST
Last Updated 25 ಅಕ್ಟೋಬರ್ 2021, 8:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಭಾರತ ಮತ್ತು ಶ್ರಿಲಂಕಾ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಉಭಯ ರಾಷ್ಟ್ರಗಳ ನೌಕಾಪಡೆಗಳ ಪರಸ್ಪರ ಕಾರ್ಯಸಾಧ್ಯತೆ ಹೆಚ್ಚಿಸಲು ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆಯ ಆರು ಹಡಗುಗಳು ನಾಲ್ಕು ದಿನಗಳ ಭೇಟಿಗಾಗಿ ಶ್ರೀಲಂಕಾಕ್ಕೆ ಆಗಮಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಲಂಕಾದ ನೌಕಾಪಡೆಗಳೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಭಾನುವಾರ ಭಾರತೀಯ ನೌಕಾಪಡೆಯವರು ಕೊಲಂಬೊ ಮತ್ತು ಟ್ರಿಂಕೋಮಲಿ ಬಂದರುಗಳಿಗೆ ಆಗಮಿಸಿದರು.

‘ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು ಶ್ರೀಲಂಕಾಕ್ಕೆ ಭೇಟಿ ನೀಡುವ ಮೂಲಕ ದ್ವಿಪಕ್ಷೀಯ ಸಂಬಂಧಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಟಿಸಿದೆ‘ ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಭಾರತ – ಶ್ರೀಲಂಕಾ ದ್ವಿಪಕ್ಷೀಯ ರಕ್ಷಣಾ ಸಹಕಾರ ಸಂಬಂಧ ವೃದ್ಧಿಯಲ್ಲಿನ ಪ್ರಬಲ ಹಾಗೂ ಸ್ಥಿರ ಆಧಾರ ಸ್ತಂಭಗಳಲ್ಲಿ ತರಬೇತಿ ಕೂಡ ಒಂದು ಪ್ರಮುಖ ಅಂಶವಾಗಿದೆ. ಈ ಭೇಟಿಯು ಈ ಸಂಬಂಧ ಬಲವರ್ಧನೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಉಭಯ ದೇಶಗಳ ನಡುವೆ ಜನರ ಸಂಪರ್ಕವನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ದೂರದೃಷ್ಟಿಗೆ ಅನುಗುಣವಾಗಿ, ಈ ಭೇಟಿಯು ಎರಡೂ ದೇಶಗಳ ರಕ್ಷಣಾ ಸಿಬ್ಬಂದಿ ನಡುವಿನ ಸೌಹಾರ್ದತೆ ಮತ್ತು ಸ್ನೇಹವನ್ನು ಬಲಪಡಿಸಲು ಸಕಾರಾತ್ಮಕ ಕೊಡುಗೆ ನೀಡುತ್ತದೆ‘ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.