ADVERTISEMENT

ಗುಂಡಿನ ದಾಳಿ: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಆರೋಗ್ಯ ಸ್ಥಿತಿ ಗಂಭೀರ

ರಾಯಿಟರ್ಸ್
Published 17 ಮೇ 2024, 13:06 IST
Last Updated 17 ಮೇ 2024, 13:06 IST
<div class="paragraphs"><p>ರಾಬರ್ಟ್ ಫಿಕೊ</p></div>

ರಾಬರ್ಟ್ ಫಿಕೊ

   

ಬನ್‌ಸ್ಕಾ ಬಿಸ್ಟ್ರಿಕಾ (ಸ್ಲೊವಾಕಿಯಾ): ಗುಂಡಿನ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಶುಕ್ರವಾರ ತಿಳಿಸಿದ್ದಾರೆ.

ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಪ್ರಧಾನಿ ರಾಬರ್ಟ್ ಕಲಿನಿಯಾಕ್, 'ಫಿಕೊ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಖಚಿತಪಡಿಸಲು ಹಲವು ದಿನಗಳು ಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

ಹ್ಯಾಂಡ್ಲೊವಾ ಪಟ್ಟಣದ ಹೌಸ್‌ ಆಫ್‌ ಕಲ್ಚರ್‌ ಬಳಿ ಆಯೋಜಿಸಿದ್ದ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದ ರಾಬರ್ಟ್‌ ಫಿಕೊ ಅವರ ಮೇಲೆ ಬುಧವಾರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದ.

‘ಆರೋಪಿಯು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಶಂಕಿತನೊಬ್ಬನನ್ನು ಈಗಾಗಲೇ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಫಿಕೊ ಅವರು ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದಾಗ ನಡೆದಿರುವ ಈ ದಾಳಿಯ ಹಿಂದೆ ರಾಜಕೀಯ ಉದ್ದೇಶವಿರುವುದು ತನಿಖೆಯಿಂದ ಸ್ಪಷ್ಟವಾಗಿದೆ’ ಎಂದು ಗೃಹ ಸಚಿವ ಮಾಟಸ್‌ ಸುಟಾಜ್‌ ಎಸ್ಟಾಕ್‌ ಹೇಳಿದ್ದಾರೆ.

‘ಫಿಕೊ ರೂಪಿಸಿದ್ದ ನೀತಿಗಳ ಬಗ್ಗೆ ಶಂಕಿತ ಆರೋಪಿ ತೀವ್ರವಾಗಿ ಅಸಮಾಧಾನಗೊಂಡಿದ್ದ. ಇದೇ ಅಂಶ ದಾಳಿಗೆ ಪ್ರಚೋದನೆ ನೀಡಿದೆ. ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಗಳಲ್ಲೂ ಶಂಕಿತ ಆರೋಪಿ ಪಾಲ್ಗೊಂಡಿದ್ದ’ ಎಂದು ಎಸ್ಟಾಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.