ADVERTISEMENT

ಇಂಡೋನೇಷ್ಯಾ: ಸಣ್ಣ ಕಾರ್ಗೊ ವಿಮಾನ ನಾಪತ್ತೆ, ಪೈಲಟ್‌ಗಾಗಿ ಹುಡುಕಾಟ

ಏಜೆನ್ಸೀಸ್
Published 15 ಸೆಪ್ಟೆಂಬರ್ 2021, 9:35 IST
Last Updated 15 ಸೆಪ್ಟೆಂಬರ್ 2021, 9:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಕಾರ್ತ(ಇಂಡೊನೇಷ್ಯಾ)(ಎಪಿ): ಇಂಡೊನೇಷ್ಯಾದ ಪೂರ್ವ ಪ್ರಾಂತ್ಯ ಪಪುವಾದಿಂದ ಬುಧವಾರ ಟೇಕ್‌ ಆಫ್ ಆದ 50 ನಿಮಿಷಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ರಿಂಬುನ್‌ ಏರ್‌ ಕಾರ್ಗೊ ಸಣ್ಣ ವಿಮಾನ, ಇಂಟಾನಾ ಜಯಾ ಜಿಲ್ಲೆಯಲ್ಲಿರುವ ಕಡಿದಾದ ಪರ್ವತಗಳಿರುವ ಕಾಡಿನಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

‘ಈ ಕಾಡಿನಲ್ಲಿ‌ ಮುರಿದುಬಿದ್ದ ಸ್ಥಿತಿಯಲ್ಲಿ ಸರಕು ಸಾಗಣೆ ವಿಮಾನ ಪತ್ತೆಯಾಗಿದೆ‘ ಎಂದು ವೈಮಾನಿಕ ಶೋಧ ಕಾರ್ಯ ನಡೆಸಿದ ತಂಡದವರು ದೃಢಪಡಿಸಿದ್ದಾರೆ.

‘ವಿಮಾನದಲ್ಲಿದ್ದ ಮೂವರು ಸಿಬ್ಬಂದಿಯನ್ನು ಸ್ಥಳಾಂತರಿಸುವುದಕ್ಕಾಗಿ ‍ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ತಂಡವು ವಿಮಾನ ಪತನಗೊಂಡಿರುವ ಸ್ಥಳಕ್ಕೆ ತೆರಳಿದೆ‘ ಎಂದು ಟಿಮಿಕಾ ಪರಿಹಾರ ಕಾರ್ಯಾಚರಣೆ ಸಂಸ್ಥೆಯ ಮುಖ್ಯಸ್ಥ ಜಾರ್ಜ್‌ ಲಿಯೊ ಮರ್ಸಿ ರಾಂಡಾಂಗ್ ತಿಳಿಸಿದ್ದಾರೆ.

ADVERTISEMENT

‘ಟ್ವಿನ್‌ ಒಟ್ಟೆರ್‌ 300‘ ವಿಮಾನ ಕಟ್ಟಡ ನಿರ್ಮಾಣದ ವಸ್ತುಗಳನ್ನು ಹೊತ್ತು ನಬ್ರೆ ಜಿಲ್ಲೆಯಿಂದ ಇನ್‌ಟಾನ್‌ ಜಿಲ್ಲೆಯತ್ತ ಸಾಗುತ್ತಿತ್ತು. ವಿಮಾನದಲ್ಲಿ ಪೈಲಟ್‌, ಸಹ ಪೈಲಟ್‌ ಮತ್ತು ತಾಂತ್ರಿಕ ಅಧಿಕಾರಿ ಇದ್ದರು ಎಂದು ಸಾರಿಗೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು.

ವಿಮಾನವು ಟೇಕಾಫ್ ಆಗುವ ಸಮಯದಲ್ಲಿ ಹವಾಮಾನ ಬಿಸಿಲಿನಿಂದ ಕೂಡಿತ್ತು. ಆದರೆ, ವಿಮಾನ ಪತನವಾಗಿರುವ ಸ್ಥಳದಲ್ಲಿ ಮೋಡಕವಿದ ವಾತಾವರಣವಿತ್ತು ಎಂದು ರಾಂಡಾಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.