ADVERTISEMENT

ಸಣ್ಣ ರಾಷ್ಟ್ರಗಳ ಗುಂಪು ವಿಶ್ವದ ಭವಿಷ್ಯ ನಿರ್ಧರಿಸುವ ದಿನಗಳು ಮುಗಿದಿವೆ: ಚೀನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2021, 7:54 IST
Last Updated 13 ಜೂನ್ 2021, 7:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಂಡನ್‌: ಸಣ್ಣ ರಾಷ್ಟ್ರಗಳ ಗುಂಪೊಂದು ವಿಶ್ವದ ಭವಿಷ್ಯವನ್ನು ನಿರ್ಧರಿಸುವ ದಿನಗಳು ಮುಗಿದಿವೆ ಎಂದು ಚೀನಾ ಹೇಳಿದೆ.

ಬ್ರಿಟನ್‌ನಲ್ಲಿ ನಡೆಯುತ್ತಿರುವ 'ಜಿ- 7 ಶೃಂಗಸಭೆ'ಯನ್ನು ಉದ್ದೇಶಿಸಿ ಚೀನಾ ಈ ಹೇಳಿಕೆ ನೀಡಿದೆ.

ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟವೇ ಜಿ–7 ಗುಂಪು. ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಇತರೆ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕ ಜಿ–7 ಶೃಂಗಸಭೆ ನಡೆಸುತ್ತವೆ.

ADVERTISEMENT

'ದೊಡ್ಡ ಅಥವಾ ಸಣ್ಣ, ಶಕ್ತಿಯುತ ಅಥವಾ ದುರ್ಬಲ, ಬಡ ಅಥವಾ ಶ್ರೀಮಂತ ದೇಶಗಳು ಸಮಾನವೆಂದು ನಾವು ಯಾವಾಗಲೂ ನಂಬುತ್ತೇವೆ. ಜಾಗತಿಕ ವ್ಯವಹಾರಗಳನ್ನು ಎಲ್ಲಾ ದೇಶಗಳ ಸಮಾಲೋಚನೆಯ ಮೂಲಕ ನಿರ್ವಹಿಸಬೇಕಿದೆ' ಎಂದು ಲಂಡನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಚೀನಾದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ, ಅತಿಕ್ರಮಣ ಮತ್ತು ಕೊರೊನಾ ವೈರಸ್‌ ಮೂಲದ ಬಗ್ಗೆ ಜಿ-7 ಶೃಂಗಸಭೆಯಲ್ಲಿ ಚರ್ಚೆಗಳಾಗುವ ಸಾಧ್ಯತೆ ಇದೆ.

ಕೊರೊನಾ ವೈರಸ್‌ ಮೂಲ ಪತ್ತೆ ಮಾಡುವ ವಿಚಾರವನ್ನು ಅಮೆರಿಕ ರಾಜಕೀಯಗೊಳಿಸುತ್ತಿದೆ ಎಂದು ಚೀನಾ ಟೀಕಿಸಿತ್ತು. ಅಲ್ಲದೇ, ಇತರ ವಿಷಯವಾಗಿ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.