ಮಾಸ್ಕೊ (ರಾಯಿಟರ್ಸ್): ಕೋವಿಡ್ ವಿರುದ್ಧದ ಆಸ್ಟ್ರಾಜೆನಿಕಾ ಮತ್ತು ಸ್ಫುಟ್ನಿಕ್ ಲೈಟ್ ಲಸಿಕೆಯ ಮಿಶ್ರಣದಿಂದ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗಲಿವೆ ಎಂದು ಇತ್ತೀಚಿನ ಅಧ್ಯಯನವು ತಿಳಿಸಿದೆ. ಅಧ್ಯಯನದಲ್ಲಿ ಭಾಗಿಯಾಗಿದ್ದ ರಷ್ಯನ್‌ಡೈರೆಟ್ ಇನ್‌ವೆಸ್ಟ್‌ಮೆಂಟ್ ಫಂಡ್ ಸೋಮವಾರ ಈ ಮಾಹಿತಿ ನೀಡಿದೆ.
ಅಧ್ಯಯನ ಫೆಬ್ರುವರಿಯಲ್ಲಿ ಅಜೆರ್‌ಬೈಜನ್‌ನಲ್ಲಿ ನಡೆದಿತ್ತು. 100 ಮಂದಿ ಒಳಗೊಂಡು ಅಧ್ಯಯನ ಮಾಡುವ ಗುರಿಯಡಿ 20 ಮಂದಿಯಿಂದ ಮಾದರಿಗಳನ್ನು ಪಡೆಯಲಾಗಿತ್ತು. ಇವರು, ಮೊದಲಿಗೆ ಆಸ್ಟ್ರಾಜೆನಿಕಾ ಲಸಿಕೆ ಪಡೆದಿದ್ದು, 29 ದಿನದ ನಂತರ ಸ್ಫುಟ್ನಿಕ್ ಲೈಟ್ ಲಸಿಕೆಯನ್ನು ಪಡೆದಿದ್ದರು.
ಸಮೀಕ್ಷೆಯ ಫಲಿತಾಂಶದ ಪ್ರಕಾರ, ದೇಹದಲ್ಲಿ ಎಸ್–ಪೋಷಕಾಂಶದಲ್ಲಿ ಗಣನೀಯ ಏರಿಕೆಯಾಗಿತ್ತು.ಸಮೀಕ್ಷೆಯ 57ನೇ ದಿನದಲ್ಲಿ, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 85ರಷ್ಟು ಮಂದಿಯಲ್ಲಿ ಈ ಅಂಶ ಪ್ರಮುಖವಾಗಿ ವ್ಯಕ್ತವಾಗಿತ್ತು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.