ಟೋಕಿಯೊ: ಜಪಾನ್‌ನ ವಾಯುವ್ಯ ಭಾಗದಲ್ಲಿ ಕಂಡುಬಂದಿರುವ ಭಾರಿ ಹಿಮಪಾತದಿಂದಾಗಿ ಮೂರು ಮಂದಿ ಸಾವಿಗೀಡಾಗಿದ್ದಾರೆ’ ಎಂದು ಅಧಿಕಾರಿಗಳುಬುಧವಾರ ತಿಳಿಸಿದ್ದಾರೆ.
‘ಭಾರಿ ಹಿಮದಿಂದಾಗಿ ಅನೇಕ ವಾಹನಗಳು ಹೆದ್ದಾರಿಯಲ್ಲೇ ಸಿಕ್ಕಿಬಿದ್ದಿದ್ದು, ಸಾವಿರಾರು ಮನೆಗಳ ವಿದ್ಯುತ್ ಸ್ಥಗಿತಗೊಂಡಿದೆ. ನಿಗಾಟ, ಯಮಗಾಟ ಹಾಗೂ ಅಮೋರಿ ಪ್ರಾಂತ್ಯದಲ್ಲಿ ಆರೂವರೆ ಅಡಿಗಿಂತಲೂ ಹೆಚ್ಚು ಹಿಮ ಬಿದ್ದಿದೆ’ ಎಂದೂ ಅವರು ಹೇಳಿದ್ದಾರೆ.
ನಿಗಾಟದ ಹೆದ್ದಾರಿಯಲ್ಲಿ ಸುಮಾರು 20 ಕಿ.ಮೀ.ವರೆಗೂ ವಾಹನಗಳು ಹಿಮದಲ್ಲಿ ಸಿಕ್ಕಿಬಿದ್ದಿದ್ದು, ಸ್ವಯಂ ರಕ್ಷಣಾ ಪಡೆಗಳು ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದವು. ಇವರ ಜೊತೆಗೆ, ಕೆಲವು ಸ್ಥಳೀಯ ಸ್ವಯಂಸೇವಕರು ಹಲವು ಗಂಟೆಗಳಿಂದ ವಾಹನಗಳಲ್ಲಿ ಸಿಕ್ಕಿಬಿದ್ದಿರುವ ಪ್ರಯಾಣಿಕರಿಗೆ ಆಹಾರವನ್ನು ಒದಗಿಸಿದರು.
ಈ ವಾರಾಂತ್ಯದಲ್ಲಿ ಮತ್ತೆ ಭಾರಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.