ಮೊಗದಿಶು: ಅಲ್–ಖೈದದೊಂದಿಗೆ ಸಂಪರ್ಕಿತ ಉಗ್ರ ಸಂಘಟನೆ ಅಲ್–ಶಬಾಬ್ ಸಹಸಂಸ್ಥಾಪಕ ಅಬ್ದುಲಾಹಿ ಯಾರೆ ಅವರನ್ನು ಹತ್ಯೆಗೈದಿರುವುದಾಗಿ ಸೋಮಾಲಿಯಾ ಸರ್ಕಾರ ಘೋಷಿಸಿದೆ.
ಸೋಮಾಲಿಯಾ ಸೇನಾಪಡೆ ಮತ್ತು ಅಂತರರಾಷ್ಟ್ರೀಯ ಪಾಲುದಾರ ಪಡೆಗಳು ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಉಗ್ರ ನಾಯಕನನ್ನು ಅ.1ರಂದು ಹತ್ಯೆ ಮಾಡಲಾಗಿದೆ ಎಂದು ಸಚಿವಾಲಯ ಮಾಧ್ಯಮಗಳಿಗೆ ತಿಳಿಸಿದೆ.
ಮುಖ್ಯಸ್ಥ ಅಹಮ್ಮದ್ ದಿರಿಯೆ ನಂತರ ಉಗ್ರ ಸಂಘಟನೆ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದ ಅಬ್ದುಲಾಹಿ, ಗುಂಪಿನ ಮುಖ್ಯ ಬೋಧಕನಾಗಿದ್ದ ಮತ್ತು ಓರ್ವ ಕಿರಾತಕನಾಗಿದ್ದ. ಆತನ ಹತ್ಯೆ ದೇಶದಿಂದ ಒಂದು ಬೇಡವಾದ ಕಲ್ಲನ್ನು ತೆಗೆದು ಎಸೆದಂತಾಗಿದೆ ಎಂದು ಸರ್ಕಾರ ಹೇಳಿದೆ.
ಅಮೆರಿಕ 2012ರಲ್ಲಿ ಬಿಡುಗಡೆಗೊಳಿಸಿದ್ದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಅಬ್ದುಲಾಹಿ ಹೆಸರಿತ್ತು. ಆತನನ್ನು ಸೆರೆ ಹಿಡಿದವರಿಗೆ ಅಮೆರಿಕ 30 ಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು.
ಹಸನ್ ಶೇಖ್ ಮಹಮ್ಮದ್ ಸೋಮಾಲಿಯಾದ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಒಂದು ವಾರದೊಳಗೆ ದಾಳಿ ಸುದ್ದಿ ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಸೋಮಾಲಿಯಾ ಸೇನಾಪಡೆ ತೀವ್ರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.