ADVERTISEMENT

ರಫಾ ಮೇಲೆ ಇಸ್ರೇಲ್‌ ದಾಳಿ: 5 ಮಂದಿ ಸಾವು, ಹಲವರಿಗೆ ಗಾಯ

ಏಜೆನ್ಸೀಸ್
Published 7 ಮೇ 2024, 3:42 IST
Last Updated 7 ಮೇ 2024, 3:42 IST
<div class="paragraphs"><p> ದಾಳಿ (ಸಾಂದರ್ಭಿಕ ಚಿತ್ರ)</p></div>

ದಾಳಿ (ಸಾಂದರ್ಭಿಕ ಚಿತ್ರ)

   

ರಫಾ: ಪ್ಯಾಲೆಸ್ಟೀನ್‌ನ ದಕ್ಷಿಣ ಗಾಜಾ ನಗರ ಭಾಗದಲ್ಲಿರುವ ರಫಾ ಪ್ರದೇಶದಲ್ಲಿ ಇಸ್ರೇಲ್‌ ತಡರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಕುವೈತ್‌ ಆಸ್ಪತ್ರೆಗಳ ಮೂಲಗಳು ಇಂದು ( ಮಂಗಳವಾರ) ಮುಂಜಾನೆ ತಿಳಿಸಿವೆ.

ಹಮಾಸ್ ಬಂಡುಕೋರರು ನಡೆಸಿದ ರಾಕೆಟ್ ದಾಳಿಯಲ್ಲಿ ಮೂವರು ಇಸ್ರೇಲ್ ಸೈನಿಕರು ಮೃತಪಟ್ಟ ಬೆನ್ನಲ್ಲೇ, ಇಸ್ರೇಲ್ ‘ರಫಾ’ ಮೇಲೆ ದಾಳಿ ನಡೆಸಲು ಯೋಜಿಸಿತ್ತು.‌ ತಡರಾತ್ರಿ ನಡೆದ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಿ ಎನ್‌ಡಿ ಟಿವಿ ವರದಿ ಮಾಡಿದೆ.

ADVERTISEMENT

ರಫಾ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಗೆ ನಿರ್ಧರಿಸಲಾಗಿತ್ತು. ಇದು ಮುಂದೆ ದೊಡ್ಡ ಮಟ್ಟದ ಯುದ್ಧಕ್ಕೆ ಕಾರಣವಾಗಬಹುದು. ಹೀಗಾಗಿ, ರಫಾ ಪ್ರದೇಶದಲ್ಲಿರುವ ಸುಮಾರು ಒಂದು ಲಕ್ಷ ಮಂದಿಯನ್ನು ಇಸ್ರೇಲ್‌ನ ಮಾನವೀಯ ನೆಲೆ ‘ಮುವಾಸಿ’ ಎಂಬಲ್ಲಿಗೆ ತೆರಳುವಂತೆ ಸೂಚಿಸಲಾಗಿತ್ತು.

‘ರಫಾ’ ಹಮಾಸ್‌ ಬಂಡುಕೋರರ ಪ್ರಾಬಲ್ಯದ ಪ್ರದೇಶವಾಗಿದ್ದು, ಇಸ್ಲಾಮಿಕ್ ಉಗ್ರ ಸಂಘಟನೆಯನ್ನು ಧ್ವಂಸಗೊಳಿಸಲು ರಫಾ ಮೇಲೆ ದಾಳಿ ನಡೆಸಲೇಬೇಕು ಎಂದು ಇಸ್ರೇಲ್ ಪ್ರತಿಪಾದಿಸುತ್ತಾ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.