ಜೋಹಾನ್ಸ್‌ಬರ್ಗ್: ವಿಶ್ವದಲ್ಲೇ ಅತ್ಯಂತ ಹೆಚ್ಚು ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರ ಶ್ರೇಯಾಂಕದಲ್ಲಿದ್ದರೆ, ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂದು ಅಂತರರಾಷ್ಟ್ರೀಯ ಚಾಲನಾ ಶಿಕ್ಷಣ ಕಂಪನಿ ಝುಟೊಬಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಅಧ್ಯಯನ ನಡೆಸಿದ 56 ದೇಶಗಳ ಪಟ್ಟಿಯಲ್ಲಿ ಥಾಯ್ಲೆಂಡ್ ಎರಡನೇ ಸ್ಥಾನದಲ್ಲಿದೆ ಮತ್ತು ಅಮೆರಿಕ ಮೂರನೇ ಸ್ಥಾನ ಪಡೆದುಕೊಂಡಿದೆ.
ವಿಶ್ವದಲ್ಲೇ ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರದಲ್ಲಿ ನಾರ್ವೆ ಪ್ರಮುಖ ಸ್ಥಾನದಲ್ಲಿದ್ದರೆ, ಸ್ವೀಡನ್ ಮೂರನೇ ಸ್ಥಾನದಲ್ಲಿದೆ. ಸುರಕ್ಷಿತ ರಸ್ತೆಗಳನ್ನು ಹೊಂದಿರುವ ರಾಷ್ಟ್ರದಲ್ಲಿ ಜಪಾನ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅಧ್ಯಯನ ತಿಳಿಸಿದೆ.
‘ನಾವು ಪ್ರತಿ ದೇಶವನ್ನು ಐದು ಅಂಶಗಳ ಆಧಾರದ ಮೇಲೆ ವಿಶ್ಲೇಷಿಸಿದ್ದೇವೆ. ಈ ಎಲ್ಲಾ ಐದು ಅಂಶಗಳಿಗೆ ನೀಡುವ ಅಂಕಗಳ ಸರಾಸರಿ ಮೊತ್ತವನ್ನು ತೆಗೆದುಕೊಂಡಿದ್ದೇವೆ‘ ಎಂದು ಝುಟೋಬಿ ತಿಳಿಸಿದೆ.
ಒಂದು ಲಕ್ಷ ಜನರು ಪ್ರಯಾಣಿಸುವ ರಸ್ತೆಯಲ್ಲಿ ಮರಣ ಪ್ರಮಾಣ ಎಷ್ಟಿದೆ, ಕಾರಿನಲ್ಲಿ ಮುಂದೆ ಕುಳಿತು ಪ್ರಯಾಣಿಸುವ ಎಷ್ಟು ಮಂದಿ ಸೀಟ್ ಬೆಲ್ಟ್ ಧರಿಸಿದ್ದರು, ಮದ್ಯಸೇವಿಸಿ ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದವರ ಸಂಖ್ಯೆ– ಇಂಥ ಅಂಶಗಳನ್ನು ಅಧ್ಯಯನ ಒಳಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.