ಸೋಲ್: ‘ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಶನಿವಾರ ದಾಖಲೆಯ (12.2 ಸೆಂಟಿಮೀಟರ್) ಹಿಮಪಾತವಾಗಿದೆ’ ಎಂದು ಕೊರಿಯಾ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.
‘40 ವರ್ಷಗಳಲ್ಲೇ (1981ರಿಂದೀಚೆಗೆ) ಈ ಡಿಸೆಂಬರ್‌ನಲ್ಲಿ ಅತಿ ಹೆಚ್ಚಿನ ಹಿಮಪಾತವಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು–ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಕೊರಿಯಾದ ಇತರ ಭಾಗಗಳಲ್ಲೂ ಶನಿವಾರದಂದು ಹಿಮಪಾತ ಅಥವಾ ಮಳೆಯಾಗಿದೆ’ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.