ಮ್ಯಾಡ್ರಿಡ್: ಅಮೆರಿಕ ಸಂಜಾತೆ, ಸ್ಪೇನ್‌ನ ನಿವಾಸಿ ಮರಿಯಾ ಬ್ರನ್ಯಾಸ್ 117ನೇ ವಯಸ್ಸಿನಲ್ಲಿ ಮಂಗಳವಾರ ಮೃತಪಟ್ಟರು. ‘ವಿಶ್ವದ ಅತಿ ಹಿರಿಯ ವ್ಯಕ್ತಿ’ ಎಂದೇ ಇವರನ್ನು ಬಣ್ಣಿಸಲಾಗುತ್ತಿತ್ತು.
ವಿಶ್ವದಲ್ಲಿ ಇರುವ 110 ವರ್ಷ ವಯಸ್ಸು ದಾಟಿದವರ ಕುರಿತು ಮಾಹಿತಿ ಸಂಗ್ರಹಿಸುವ ‘ದಿ ಜರಂಟಾಲಜಿ ರಿಸರ್ಚ್ ಗ್ರೂಪ್’ ಮಾಡಿದ್ದ ಪಟ್ಟಿಯ ಅನ್ವಯ ಬ್ರನ್ಯಾಸ್ ಅವರು ವಿಶ್ವದ ಅತಿ ಹಿರಿಯ ವ್ಯಕ್ತಿ ಎನಿಸಿದ್ದರು. ಬ್ರನ್ಯಾಸ್ ಅವರಿಗಿಂತ ಮೊದಲು, ಫ್ರಾನ್ಸ್ ದೇಶದ ಕ್ರೈಸ್ತ ಸನ್ಯಾಸಿನಿ ಲೂಸಿ ರ‍್ಯಾಂಡನ್ ವಿಶ್ವದಲ್ಲೇ ಅತಿ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಅವರು ಕಳೆದ ವರ್ಷ ಮೃತಪಟ್ಟರು.
ಬ್ರನ್ಯಾಸ್ ಸಾವಿನ ಕುರಿತು ಅವರದ್ದೇ ‘ಎಕ್ಸ್’ ಖಾತೆಯಲ್ಲಿ ಕುಟುಂಬದವರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.