ಸಿಡ್ನಿ: ವೀರ್ಯಾಣು ದಾನ ಮಾಡಿದ ವ್ಯಕ್ತಿಯೊಬ್ಬನಿಗೆ ಕಾನೂನುಬದ್ಧ ತಂದೆಯ ಸ್ಥಾನವನ್ನು ಆಸ್ಟ್ರೇಲಿಯಾ ಹೈಕೋರ್ಟ್ ನೀಡಿದೆ.
ಸಲಿಂಗಕಾಮಿ ಸ್ನೇಹಿತನ ಹೆಂಡತಿ ಗರ್ಭಿಣಿಯಾಗಲೆಂದು ದಶಕದ ಹಿಂದೆ ರಾಬರ್ಟ್(ಹೆಸರು ಬದಲಾಯಿಸಲಾಗಿದೆ) ವೀರ್ಯಾಣು ದಾನ ಮಾಡಿದ್ದ. ಹುಟ್ಟಿದ ಹೆಣ್ಣು ಮಗುವಿನ ಮೇಲೆ ಈತನ ಹಕ್ಕೂ ಇದೆ ಎಂದು ನ್ಯಾಯಾಲಯ ಆದೇಶಿಸಿದೆ.
ಕುಟುಂಬ 2015ರಲ್ಲಿ ಆಸ್ಟ್ರೇಲಿಯಾ ತೊರೆದು ನ್ಯೂಜಿಲ್ಯಾಂಡ್‌ಗೆ ತೆರಳುವ ವೇಳೆ ಸಮಸ್ಯೆ ಉದ್ಭವಿಸಿತ್ತು.ಸ್ನೇಹಿತನ ಮಗಳನ್ನು ತುಂಬ ಹಚ್ಚಿಕೊಂಡಿರುವ ಕಾರಣ ಈಕೆ ನ್ಯೂಜಿಲ್ಯಾಂಡ್‌ನಲ್ಲಿ ವಾಸಿಸಬೇಕೇ ಬೇಡವೇ ಎನ್ನುವುದರ ಕುರಿತು ರಾಬರ್ಟ್ ಕೂಡಾ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಮಗುವಿನ ಆರೋಗ್ಯ, ಶಿಕ್ಷಣಕ್ಕೆ ಈತ ಆರ್ಥಿಕವಾಗಿ ಸಹಾಯ ಮಾಡಿದ್ದಾನೆ ಎಂದು ಉಲ್ಲೇಖಿಸಿರುವ ನ್ಯಾಯಾಲಯ, ಬಾಲಕಿ ಆಸ್ಟ್ರೇಲಿಯಾದಲ್ಲೇ ನೆಲೆಸಿರಬೇಕು ಹಾಗೂ ಆಕೆಯನ್ನು ನೋಡಿಕೊಂಡು ಬರುವ ಹಕ್ಕೂ ಈತನಿಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.