ADVERTISEMENT

ಈಸ್ಟರ್ ಆಚರಣೆಗೆ ಬಿಗಿ ಭದ್ರತೆ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಪಿಟಿಐ
Published 31 ಮಾರ್ಚ್ 2024, 13:01 IST
Last Updated 31 ಮಾರ್ಚ್ 2024, 13:01 IST
ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ
ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ   

ಕೊಲಂಬೊ: ‘ಈಸ್ಟರ್‌ ಸಂಡೆಯಂದು 2019ರಲ್ಲಿ ಚರ್ಚ್‌ಗಳಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಕೃತ್ಯದ ಕುರಿತು ಮುಕ್ತ, ಸ್ವತಂತ್ರ ತನಿಖೆಗೆ ಸರ್ಕಾರ ಅವಕಾಶ ನೀಡಿದೆ’ ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.

ಆ ಕೃತ್ಯದ ಹಿನ್ನೆಲೆಯಲ್ಲಿ ಭಾನುವಾರ ಬಿಗಿ ಭದ್ರತೆಯಲ್ಲಿ ವಿವಿಧ ಚರ್ಚ್‌ಗಳಲ್ಲಿ ಈಸ್ಟರ್‌ ಸಂಡೆ ಕಾರ್ಯಕ್ರಮ ನಡೆಯಿತು. ಪೊಲೀಸ್ ಇಲಾಖೆಯ ವಕ್ತಾರರ ಪ್ರಕಾರ, ಮುಂಜಾಗ್ರತಾ ಕ್ರಮವಾಗಿ 1,873 ಚರ್ಚ್‌ಗಳಲ್ಲಿ 6,522 ಪೊಲೀಸರನ್ನು ನಿಯೋಜಿಸಲಾಗಿತ್ತು.

2019ರಲ್ಲಿ ಸ್ಥಳೀಯ ಇಸ್ಲಾಮಿಸ್ಟ್ ಉಗ್ರವಾದಿ ಸಂಘಟನೆ ನ್ಯಾಷನಲ್‌ ತೌಹೀದ್ ಜಮಾತ್ (ಎನ್‌ಟಿಜೆ) ತಾರಾ ಹೋಟೆಲ್‌ ಹಾಗೂ ಚರ್ಚ್‌ಗಳಲ್ಲಿ ಬಾಂಬ್‌ ಸ್ಫೋಟ ನಡೆಸಿತ್ತು. 11 ಭಾರತೀಯರು ಸೇರಿದಂತೆ 270 ಜನರು ಮೃತಪಟ್ಟಿದ್ದರು. ಶಂಕೆಯ ಮೇಲೆ ಸಾವಿರಕ್ಕೂ ಹೆಚ್ಚು ಜನರನ್ನು ಪೊಲೀಸರನ್ನು ವಶಕ್ಕೆ ಪಡೆದಿದ್ದರು. ಆದರೆ, ಇದುವರೆಗೂ ಒಬ್ಬರಿಗೂ ಈ ಕೃತ್ಯದ ಸಂಬಂಧ ಶಿಕ್ಷೆಯಾಗಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.