ADVERTISEMENT

ಶ್ರೀಲಂಕಾ ನೌಕಾಪಡೆಯಿಂದ 21 ಮಂದಿ ಭಾರತೀಯ ಮೀನುಗಾರರ ಬಂಧನ

ಶ್ರೀಲಂಕಾಕ್ಕೆ ಸೇರಿದ ಜಲಪ್ರದೇಶದಲ್ಲಿ ಮೀನುಗಾರಿಕೆ ಆರೋಪ–21 ಭಾರತೀಯ ಮೀನುಗಾರರನ್ನು ಬಂಧಿಸಿದ ನೌಕಾಪಡೆ

ಪಿಟಿಐ
Published 7 ಡಿಸೆಂಬರ್ 2023, 9:28 IST
Last Updated 7 ಡಿಸೆಂಬರ್ 2023, 9:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

(ಕೃಪೆ –ಪಿಟಿಐ) 

ಕೊಲಂಬೊ: ಶ್ರೀಲಂಕಾ ಜಲ ಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಭಾರತದ ಕನಿಷ್ಠ 21 ಮೀನುಗಾರರನ್ನು ಬಂಧಿಸಲಾಗಿದೆ ಎಂದು ದ್ವೀಪ ರಾಷ್ಟ್ರದ ನೌಕಾಪಡೆ ತಿಳಿಸಿದೆ.

ADVERTISEMENT

ಬುಧವಾರ(ಡಿ.6) ಮನ್ನಾರ್ ಮತ್ತು ಕೋವಿಲನ್‌ನ ಈಶಾನ್ಯ ಸಮುದ್ರದಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ದೋಣಿ‌‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದಲ್ಲಿ ಮೀನುಗಾರರ ಸಮಸ್ಯೆ ಧಕ್ಕೆಯುಂಟುಮಾಡುತ್ತಿದೆ. 2023ರಲ್ಲಿ ಒಟ್ಟು 195 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿರುವುದಾಗಿ ನೌಕಾಪಡೆ ತಿಳಿಸಿದೆ.

ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ಜಲ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಶ್ರೀಲಂಕಾದ ಅಧಿಕಾರಿಗಳು ಭಾರತೀಯ ಮೀನುಗಾರರನ್ನು ಬಂಧಿಸಿದ ಹಲವು ನಿದರ್ಶನಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.