ADVERTISEMENT

ಭಾರತ ಸೇರಿ ಏಳು ರಾಷ್ಟಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ –ಶ್ರೀಲಂಕಾ ತೀರ್ಮಾನ

ಪಿಟಿಐ
Published 7 ಮೇ 2024, 16:10 IST
Last Updated 7 ಮೇ 2024, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ (ಪಿಟಿಐ): ಭಾರತ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತವಾಗಿ ಪ್ರವಾಸಿ ವೀಸಾ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಭಾರತವಲ್ಲದೆ ಚೀನಾ, ರಷ್ಯಾ, ಜಪಾನ್‌, ಮಲೇಷ್ಯಾ, ಥಾಯ್ಲೆಂಡ್, ಇಂಡೊನೇಷ್ಯಾ ರಾಷ್ಟ್ರಗಳ ಪ್ರವಾಸಿಗಳಿಗೆ ಶುಲ್ಕರಹಿತವಾಗಿ ವೀಸಾ ಸೇವೆ ನೀಡಲಾಗುತ್ತದೆ ಎಂದು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.

‘ವಿದೇಶಿಯರಿಗೆ 30 ದಿನ ಅವಧಿಯ ವೀಸಾಗಾಗಿ 50 ಡಾಲರ್ ಶುಲ್ಕ ವಿಧಿಸುವ ಹಾಗೂ ಭಾರತ ಸೇರಿ ಏಳು ರಾಷ್ಟ್ರಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ ನೀಡುವ ವ್ಯವಸ್ಥೆಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿಕೆಯು ಸ್ಪಷ್ಟಪಡಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.