ADVERTISEMENT

ಶ್ರೀಲಂಕಾ: ತುರ್ತು ಪರಿಸ್ಥಿತಿ ಹಿಂದಕ್ಕೆ

ಏಜೆನ್ಸೀಸ್
Published 23 ಆಗಸ್ಟ್ 2019, 20:16 IST
Last Updated 23 ಆಗಸ್ಟ್ 2019, 20:16 IST
   

ಕೊಲಂಬೊ: ಈಸ್ಟರ್‌ ದಾಳಿಯ ನಂತರ ವಿಧಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಹಿಂಪಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದರು.

‘ತುರ್ತುಪರಿಸ್ಥಿತಿಯನ್ನು ಮುಂದುವರೆಸುವ ಯಾವುದೇ ಹೊಸ ಘೋಷಣೆಯನ್ನುಅಧ್ಯಕ್ಷಮೈತ್ರಿಪಾಲ ಸಿರಿಸೇನ ಅವರು ಮಾಡಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದೇಶ ಸಹಜ ಸ್ಥಿತಿಗೆ ಬರುತ್ತಿರುವ ಕಾರಣ ದೇಶದಲ್ಲಿರುವ ಕಠಿಣ ಕಾನೂನನ್ನು ಸಡಿಲಗೊಳಿಸಬೇಕು’ ಎಂದುಪ್ರವಾಸ ಸಚಿವ ಜಾನ್‌ ಅಮರತುಂಗಾ, ಅಧ್ಯಕ್ಷ ಸಿರಿಸೇನ ಅವರನ್ನು ಕೇಳಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.